ಸಮ್ಮಿಶ್ರ ಸರಕಾರದಲ್ಲಿ ನೆಲಬಾಂಬ್ ಗಳಿವೆ ಎಂದ ಬಿಜೆಪಿ ಶಾಸಕ!
ರಾಜ್ಯದಲ್ಲಿ ಐದಾರೂ ಅಧಿಕಾರ ಕೇಂದ್ರಗಳಿವೆ. ದೇವೇಗೌಡರು ರಿಮೋಟ್ ಕಂಟ್ರೋಲರ್, ಎಚ್ .ಡಿ. ರೇವಣ್ಣ ಸೂಪರ್ ಸಿಎಂ, ಕುಮಾರಸ್ವಾಮಿ ನಾಕಾವಸ್ತೆ ಸಿಎಂ, ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಇನ್ನೊಂದು ಅಧಿಕಾರ ಕೇಂದ್ರ., ತಮ್ಮ ಅಸ್ಥಿತ್ವಕ್ಕಾಗಿ ಪರಮೇಶ್ವ ಹಾಗೂ ಡಿಕೆಶಿ ಹೋರಾಟ ಮಾಡುತ್ತಿದ್ದಾರೆ ಎಂದರು.
ಸಮ್ಮಿಶ್ರ ಸರ್ಕಾರದಲ್ಲಿ ನೆಲಬಾಂಬ್ ಗಳಿವೆ. ಲೋಕ ಚುನಾವಣೆಗೂ ಮುನ್ನವೇ ಈ ನೆಲ ಬಾಂಬ್ ಗಳು ಸ್ಪೋಟಗೊಳ್ಳಲಿವೆ ಎಂದು ದಾವಣಗೆರೆಯಲ್ಲಿ ರೇಣುಕಾಚಾರ್ಯ ವ್ಯಂಗ್ಯವಾಡಿದ್ದಾರೆ.