ನೀರಾವರಿ ಸಭೆಯಲ್ಲಿ ಹಾಸ್ಯ ಚಟಾಕಿ ಹಾರಿಸಿದ ಬಿಜೆಪಿ, ಕಾಂಗ್ರೆಸ್ ಶಾಸಕರು
ಗುರುವಾರ, 6 ಡಿಸೆಂಬರ್ 2018 (13:58 IST)
ಬೆಂಗಳೂರು : ಇಂದು ನಡೆದ ನೀರಾವರಿ ಸಭೆಯಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಅವರನ್ನು ಕಾಲೆಳೆದು ಹಾಸ್ಯ ಚಟಾಕಿ ಹಾರಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಸಿಎಂ ಕುಮಾರಸ್ವಾಮಿ ಅವರು ನೀರಾವರಿ ಸಭೆ ಕರೆದಿದ್ದರು. ಆ ವೇಳೆ ಸಭೆಗೆ ಆಗಮಿಸಿದ ಎಚ್.ಕೆ.ಪಾಟೀಲ್, ಕೆ.ಎಸ್.ಈಶ್ವರಪ್ಪ, ಬಸವರಾಜ ಬೊಮ್ಮಾಯಿ ಹಾಗೂ ಎಂ.ಬಿ.ಪಾಟೀಲ್ ಜೊತೆಯಲ್ಲ ಕುಳಿತು ಮಾತುಕತೆಯಲ್ಲಿ ತೊಡಗಿದ್ದರು. ಇದನ್ನು ಗಮನಿಸಿದ ಸಚಿವ ಡಿ.ಕೆ.ಶಿವಕುಮಾರ್ ಅವರು, “ಅವರನ್ನ ಕರೆದುಕೊಂಡು ಹೋಗುವುದಕ್ಕೆ ತೀರ್ಮಾನ ಮಾಡಿದ್ದೀರಾ” ಎಂದು ಕೆ.ಎಸ್.ಈಶ್ವರಪ್ಪ ಅವರ ಕಾಲೆಳೆದಿದ್ದಾರೆ.
ತಕ್ಷಣವೇ ಡಿ.ಕೆ.ಶಿವಕುಮಾರ್ ಅವರಿಗೆ ಉತ್ತರ ಕೊಟ್ಟ ಈಶ್ವರಪ್ಪ ಅವರು,”ಒಂದು ಪರ್ಸೇಂಟ್ ಆದ್ರೂ ಯಶಸ್ವಿ ಆಗುತ್ತೆ ಅಂತ ನಿನಗೆನಾದ್ರು ನಂಬಿಕೆ ಇದೆಯೇನಪ್ಪಾ” ಎಂದು ಪ್ರಶ್ನೆದರು. ಹಾಗೇ ಮಾತು ಮುಂದುವರೆಸಿ ‘ಎಚ್.ಕೆ. ಪಾಟೀಲ್ ಅವರನ್ನಾದರೂ ಕರೆದುಕೊಂಡು ಹೋಗಬಹುದು ಅಂತ ನಂಬಬಹುದು. ಆದರೆ ಎಂ.ಬಿ.ಪಾಟೀಲ್ ಅವರನ್ನು ಕರೆದುಕೊಂಡು ಹೋಗಲು ಸಾಧ್ಯವೇ” ಎಂದು ಪ್ರಶ್ನಿಸಿ ಹಾಸ್ಯ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.