ಯಲಹಂಕದ ವಾಯುನೆಲೆಗೆ ಲ್ಯಾಂಡ್ ಸ್ನಾಯಿಕ್ ಸಾಯಿ ತೇಜುವಿನ ಮೃತದೇಹ

ಶನಿವಾರ, 11 ಡಿಸೆಂಬರ್ 2021 (20:19 IST)
ತಮಿಳುನಾಡಿನ ನೀಲಗಿರಿಯ  ಕೂನೂರಿನ ಸಂಮೀಪ ಸೇನಾ ವಿಮಾನ ಪತನಗೊಂಡು ರಕ್ಷಣಾ ಪಡೆಗಳ  ಮುಖ್ಯಸ್ಥ ಜನರಲ್ ಬಿಪಿನ್ ರಾವತ್ , ಅವರ ಪತ್ನಿ ಮತ್ತು ಇತರ 11 ರಕ್ಷಣಾ ಸಿಬ್ಬಂದಿಗಳು ಸಾವನ್ನಪ್ಪಿದ್ರು. ಸಾವನ್ನಪ್ಪಿದ  ಎಲ್ಲಾರ ದೇಹವನ್ನ ಹಸ್ತಾಂತರ ಮಾಡುವ ಕೆಲಸವಾಗ್ತಿದೆ. ಇಂದು ಭಾರತೀಯ ವಾಯುಸೇನೆಯ ವಿಶೇಷ ವಿಮಾನದಲ್ಲಿ ಯಲಹಂಕದ ವಾಯುನೆಲೆಗೆ ಲ್ಯಾಂಡ್ ಸ್ನಾಯಿಕ್ ಸಾಯಿ ತೇಜುವಿನ ಮೃತದೇಹ ತೆಗೆದುಕೊಂಡು ಬಂದ್ರು. ತದನಂತರ ಪಾರ್ಥಿವ ಶರೀರವನ್ನ ರಕ್ಷಣಾ ಸಿಬ್ಬಂದಿಗಳು ವಿಮಾನದಿಂದ ಕೆಳಗಿಳಿಸಿ ರಕ್ಷಣಾ ಇಲಾಖೆಯ ಹಿರಿಯ ಅಧಿಕಾರಿಗಳು ಗೌರವ ವಂದನೆ ಸಲ್ಲಿಸಿದ್ರು. ಆಂಬ್ಯುಲೆನ್ಸ್ ಮುಖಾಂತರ ಕಮೊಂಡೋ ಆಸ್ಪತ್ರೆಗೆ ಸಾಯಿ ತೇಜ ಪಾರ್ಥಿವ ಶರೀರವನ್ನ ಕಳಿಸಲಾಯ್ತು. ಇನ್ನೂ ಕಮೊಂಡೊ ಆಸ್ಪತ್ರೆಯಿಂದ ಆಂಧ್ರದ ಚಿತ್ತೂರು ಜಿಲ್ಲೆಯ ಮದನಪಲ್ಲಿಯ ಕಡೆಗೆ ಸಾಯಿ ತೇಜರ ಪಾರ್ಥಿವ ಶರೀರವನ್ನ ಅಧಿಕಾರಿಗಳು ಕಳಿಸಿಕೊಡಲ್ಲಿದ್ದಾರೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ