ಮಾರ್ಗಮಧ್ಯೆ ನಿಲ್ಲಿಸಿ ನಮಾಜ್ ಮಾಡಿದ ಪ್ರಕರಣ: ಚಾಲಕನಿಗೆ ಬಿಸಿಮುಟ್ಟಿಸಿದ ಇಲಾಖೆ

Sampriya

ಗುರುವಾರ, 1 ಮೇ 2025 (16:15 IST)
Photo Credit X
ಹಾವೇರಿ: ಬಸ್ಸನ್ನು ಮಾರ್ಗಮಧ್ಯೆ ನಿಲ್ಲಿಸಿ, ಪ್ರಯಾಣಿಕರ ಆಸನದಲ್ಲಿ ಕುಳಿತು ನಮಾಜ್ ಮಾಡಿದ ಪ್ರಕರಣ ಸಂಬಂಧ ಚಾಲಕ ಎಆರ್‌ ಮುಲ್ಲಾ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ಹಾನಗಲ್‌ನಿಂದ ವಿಶಾಲಗಡಕ್ಕೆ ಹೊರಟಿದ್ದ ಬಸ್ಸನ್ನು ಮಾರ್ಗಮಧ್ಯೆಯೇ ನಿಲ್ಲಿಸಿ ಪ್ರಯಾಣಿಕರ ಆಸನದಲ್ಲಿ ಕುಳಿತು ನಮಾಜ್ ಮಾಡಿ ಕರ್ತವ್ಯಲೋಪ ಎಸಗಿದ್ದ ಆರೋಪದಡಿ ಚಾಲಕ ಎ.ಆರ್. ಮುಲ್ಲಾ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (ವಾಕರಸಾಸಂ) ಹಾನಗಲ್ ಡಿಪೊದ ಚಾಲಕ‌ ಮುಲ್ಲಾ ಅವರು ಬಸ್‌ನಲ್ಲಿ ನಮಾಜ್ ಮಾಡಿದ್ದ ವಿಡಿಯೋವೊಂದು ಈಚೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಅದನ್ನು ಗಂಭೀರವಾಗಿ ಪರಿಗಣಿಸಿದ್ದ ಜಿಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿ ವಿಜಯಕುಮಾರ್ ಅವರು ತನಿಖೆಗೆ ಸೂಚನೆ ನೀಡಿದ್ದರು.

ತನಿಖೆ ನಡೆಸಿದ್ದ ಭದ್ರತಾ ವಿಭಾಗದ ಅಧಿಕಾರಿಗಳು, ಪ್ರಾಥಮಿಕ ವರದಿ ನೀಡಿದ್ದಾರೆ. ಅದನ್ನು ಆಧರಿಸಿ ಚಾಲಕ‌ ಮುಲ್ಲಾ ಅವರನ್ನು ಸೇವೆಯಿಂದ ಅಮಾನತು ಮಾಡಿ ನಿಯಂತ್ರಣಾಧಿಕಾರಿ ಅವರು ಆದೇಶ ಹೊರಡಿಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ