ಅನ್ನಭಾಗ್ಯ ಯೋಜನೆಗೆ ಕೇಂದ್ರ ಅಡ್ಡಿ

ಮಂಗಳವಾರ, 20 ಜೂನ್ 2023 (15:23 IST)
5 ಕೆಜಿ ಅಕ್ಕಿ ಖರೀದಿ ಬಗ್ಗೆ ಕೇಂದ್ರ ಸರ್ಕಾರ ಮಾತು ಕೊಟ್ಟಿತ್ತು. ಆದರೆ ಈಗ ಇಲ್ಲ ಎಂತಿದೆ. ರಾಜ್ಯಸರ್ಕಾರದ ಅನ್ನಭಾಗ್ಯ ಕಾರ್ಯಕ್ರಮ ಯಶಸ್ವಿ ಆಗಬಾರದು ಅಂತ ಈಗ ಹಿಂದೆ ಪಡೆದಿದ್ದಾರೆ ಎಂದು ಸಚಿವ ಸಂತೋಷ್ ಲಾಡ್ ಕೇಂದ್ರ ಸರ್ಕಾರದ ನಡೆ ಖಂಡಿಸಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಅಕ್ಕಿ ಕೊಡದಿರುವ ಹಿನ್ನೆಲೆ ಬೇರೆ ರಾಜ್ಯಗಳಿಂದ ಖರೀದಿ ಮಾಡುವುದಕ್ಕೆ ಮುಖ್ಯಮಂತ್ರಿಗಳು ಮುಂದಾಗಿದ್ದಾರೆ. ಬಹುತೇಕ ನಾವು ನೀಡಿದ ಸಮಯದಲ್ಲೇ ಕೊಡುತ್ತೇವೆ. ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಮುಖ್ಯಮಂತ್ರಿಗಳು ಕೊಡುತ್ತಾರೆ ಎಂದರು. ಕೇಂದ್ರ ಸರ್ಕಾರವನ್ನು ಕೇಳಿ ಗ್ಯಾರಂಟಿ ಘೋಷಣೆ ಮಾಡಿದ್ರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಪತ್ರದ ಮೂಲಕ ಅವರು ತಾನೇ ಕೊಟ್ಟಿದ್ದು. ಕಳೆದ ಬಾರಿ ಬಿಜೆಪಿ ಪ್ರಣಾಳಿಕೆಯನ್ನು ಕೇಂದ್ರಕ್ಕೆ ಕೇಳಿ ಕೊಟ್ಟಿದ್ರಾ? ಪ್ರಣಾಳಿಕೆ ಕೊಡುವಂತದ್ದು ರಾಜ್ಯಕ್ಕೆ ಸಂಬಂಧ ಪಟ್ಟಿದ್ದು. ಕೇಂದ್ರದವರು ಮಾತು ಕೊಟ್ಟು ವಾಪಸ್ ಪಡೆದ ಉದ್ದೇಶ ಏನು...? ನಾವು ನೀಡಿದ ಕಾರ್ಯಕ್ರಮ ಯಶಸ್ವಿ ಆಗಬಾರದು ಎಂಬ ಉದ್ದೇಶ ಅವರದ್ದಿದೆ. ಈ ಬೆಳವಣಿಗೆಯನ್ನು ಕರ್ನಾಟಕ ಅಷ್ಟೇ ಅಲ್ಲದೇ ಇಡೀ ದೇಶದ ಜನತೆ ನೋಡ್ತಾ ಇದೆ. ಶಕ್ತಿ ಯೋಜನೆ ಬಿಟ್ಟು ಉಳಿದ ನಾಲ್ಕು ಯೋಜನೆಗಳಲ್ಲಿ ಯಾವುದೇ ಗೊಂದಲ ಇಲ್ಲ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ