ಎರಡು ವಾರ ಲಾಕ್ ಡೌನ್ ವಿಸ್ತರಣೆ ಮಾಡಿದ ಮುಖ್ಯಮಂತ್ರಿ

ಬುಧವಾರ, 29 ಏಪ್ರಿಲ್ 2020 (17:09 IST)
ಮೇ 3 ಕ್ಕೆ ಲಾಕ್ ಡೌನ್ ಕೊನೆಗೊಳ್ಳುತ್ತದೆ ಎಂದು ಜನರು ಭಾವಿಸಿರುವಾಗಲೇ ಮತ್ತೆ ಎರಡು ವಾರಗಳ ಕಾಲ ಲಾಕ್ ಡೌನ್ ವಿಸ್ತರಣೆ ಮಾಡುವುದಾಗಿ ಮುಖ್ಯಮಂತ್ರಿ ಘೋಷಣೆ ಮಾಡಿದ್ದಾರೆ.

ಮೇ 3 ರ ನಂತರವೂ ಎರಡು ವಾರಗಳವರೆಗೆ ಲಾಕ್ ಡೌನ್ ಮುಂದುವರಿಯಲಿದೆ ಎಂದಿರುವ ಸಿಎಂ, ಬೆಳಗ್ಗೆ 7 ರಿಂದ 11 ರವರೆಗೆ ಜನರ ಸಂಚಾರಕ್ಕೆ ಅನೂಕೂಲ ಮಾಡಿಕೊಡೋದಾಗಿ ಹೇಳಿದ್ದಾರೆ.

ಅಗತ್ಯ ವಸ್ತಗಳನ್ನು ಜನರು ಕೊಳ್ಳೋಕೆ ನಿರ್ಬಂಧವೇನೂ ಇಲ್ಲ. ಕೊರೊನಾ ನಿಯಂತ್ರಣಕ್ಕೆ ಈ ಕ್ರಮ ಅನಿವಾರ್ಯವಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಅಂದ್ಹಾಗೆ ಮತ್ತೆ ಎರಡು ವಾರಗಳ ಕಾಲ ಲಾಕ್ ಡೌನ್ ವಿಸ್ತರಣೆ ಆಗಿರೋದು ಪಂಜಾಬ್ ನಲ್ಲಿ. ಅಲ್ಲಿನ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಲಾಕ್ ಡೌನ್ ಮುಂದುವರಿಸೋ ನಿರ್ಧಾರ ಪ್ರಕಟ ಮಾಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ