ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಟ್ವೀಟ್ ಗೆ ತಿರುಗೇಟು ನೀಡಿದ ಸಿಎಂ
ದಿ ಕಾಶ್ಮೀರ್ ಪೈಲ್ಸ್ ಚಿತ್ರಕ್ಕೆ ಬೆಳಗಾವಿಯನ್ನ ಹೋಲಿಸಿ ಶಿವಸೇನೆ ನಾಯಕ ಸಂಜಯ್ ರಾವತ್ ಮಾಡಿರುವ ಟ್ವೀಟ್ ಗೆ ಸಿಎಂ ಕಾಶ್ಮೀ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ಅದೊಂದು ಸ್ಟಂಟ್ ಮಾತ್ರ, ಬೆಳಗಾವಿ ವಿಚಾರ 1956 ನಲ್ಲೇ ತೀರ್ಮಾನ ಆಗಿದೆ. 1956 ರ ರಾಜ್ಯ ಪುನರ್ ವಿಂಗಡಣೆ ಅನುಗುಣವಾಗಿ ಆಗಿದೆ. ಸತ್ಯ ಹೇಳಬೇಕು ಅಂದ್ರೆ ನಮ್ಮ ಕನ್ನಡ ಮಾತಾಡುವ ಸೊಲ್ಲಾಪುರ, ಅಕ್ಕಲಕೋಟೆ ಮಹಾರಾಷ್ಟ್ರದಲ್ಲಿ ಉಳಿದಿದೆ, ಈ ರೀತಿಯಲ್ಲಿ ಮಾತಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ಅವರು ಅಗಾಗ ಬೆಳಗಾವಿ ಹೆಸರಿನಲ್ಲಿ ಅಲ್ಲಿರುವ ಸಮಸ್ಯೆಗಳನ್ನು ಡೈವರ್ಟ್ ಮಾಡಲು ಈ ಕೆಲಸ ಮಾಡುತ್ತಾರೆ ಹಾಗಾಗಿ ಈಗ ಅವರು ಮಾಡುತ್ತಿರುವುದು ಕೇವಲ ರಾಜಕೀಯ ಸ್ಟಂಟ್, ಬೆಳಗಾವಿ ವಿಚಾರ ಮುಗಿದ ಅಧ್ಯಾಯವಾಗಿದೆ ಎನ್ನುವ ಮೂಲಕ ಶಿವಸೇನೆಗೆ ಸಂಸದನಿಗೆ ಟಾಂಗ್ ನೀಡಿದ್ದಾರೆ.