ಸಂಸ್ಥೆಗಳ ಚುನಾವಣೆಯ ಮತ ಏಣಿಕೆ; ಬಿಜೆಪಿ ತೆಕ್ಕೆಗೆ ಜಾರಿದ ಕಂಪ್ಲಿ ಪುರಸಭೆ
ಗುರುವಾರ, 14 ನವೆಂಬರ್ 2019 (11:23 IST)
ಬೆಂಗಳೂರು : ಮಂಗಳೂರು ಮತ್ತು ದಾವಣಗೆರೆ ಮಹಾನಗರಪಾಲಿಕೆ ಸೇರಿದಂತೆ 6 ನಗರಸಭೆ, 3 ಪುರಸಭೆ, 3 ಪಟ್ಟಣ ಪಂಚಾಯಿತಿ ಹಾಗೂ ವಿವಿಧ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತ ಏಣಿಕೆ ಕಾರ್ಯ ಪ್ರಾರಂಭವಾಗಿದೆ.
ಇದರಲ್ಲಿ ಬಳ್ಳಾರಿ ಜಿಲ್ಲೆಯ ಕಂಪ್ಲಿ ಪುರಸಭೆ ಬಿಜೆಪಿ ಮಡಿಲಿಗೆ ಸೇರಿದೆ ಎನ್ನಲಾಗಿದೆ. 23 ವಾರ್ಡ್ ಗಳ ಪೈಕಿ 13 ವಾರ್ಡ್ ಗಳಲ್ಲಿ ಬಿಜೆಪಿ ಜಯ ಸಾಧಿಸಿದೆ.
10 ವಾರ್ಡ್ ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸುವುದರ ಮೂಲಕ ಕಂಪ್ಲಿ ಪುರಸಭೆ ಬಿಜೆಪಿ ತೆಕ್ಕೆಗೆ ಜಾರಿದೆ.