ಮಲೀನವಾಗುತ್ತಿದ್ದಾಳೆ ಘಟಪ್ರಭೆ

ಮಂಗಳವಾರ, 25 ಸೆಪ್ಟಂಬರ್ 2018 (16:58 IST)
ಅಕ್ರಮ ಮರಳು ಕೇಂದ್ರಗಳ ಮೆಲೆ ದಾಳಿ ಮಾಡಿ ಸರಕಾರ ವಶಕ್ಕೆ ಪಡೆಯುತ್ತಿದೆ. ಆದರೆ ಘಟಪ್ರಭಾ ನದಿಯಲ್ಲಿ ಮರಳನ್ನು ಮತ್ತು ಅಕ್ರಮವಾಗಿ ಪ್ರತಿ ನಿತ್ಯ 100 ಕ್ಕೂ ಲಾರಿಗಳನ್ನ  ವಾಶೀಂಗ್ ಮಾಡಿ ಕುಡಿಯುವ ನದಿಯ ನೀರನ್ನ ಕಲುಷಿತ ಮಾಡುತ್ತಿದ್ದಾರೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಪರಸ್ಯಾನಟ್ಟಿ ಗ್ರಾಮದ ಬಳಿ ಇರುವ ಘಟಪ್ರಭಾ ನದಿಯಲ್ಲಿ ಮರಳನ್ನು ಮತ್ತು ಅಕ್ರಮವಾಗಿ ಪ್ರತಿ ನಿತ್ಯ 100 ಕ್ಕೂ ಲಾರಿಗಳನ್ನ  ವಾಶೀಂಗ್ ಮಾಡಿ ಕುಡಿಯುವ ನದಿಯ ನೀರನ್ನ ಕಲುಷಿತ ಮಾಡುತ್ತಿದ್ದಾರೆ.

 ಆದರೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅದಿಕಾರಿಗಳು ಮತ್ತು ಕಾಕತಿ, ಯಮಕನಮರಡಿ ಪೊಲೀಸರು ಯಾವುದೇ ಕ್ರಮ ಕೈ ಗೊಳ್ಳದೆ ಮರಳು ದಂಧೆ ಕೋರರಿಗೆ ಸಾಥ ಕೊಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇಂತಹ ದಂಧೆಕೋರರಿಗೆ ಕಡಿವಾಣ ಹಾಕೋದು ಬಿಟ್ಟು ಸರಕಾರದಿಂದ ಮಾನ್ಯತೆ ಪಡೆದ ಆಕಾಶ ಸ್ಟೋನ್ ಕ್ರಷ್ರರ್ ಎದುರಿಗೆ ಹೋಮ್ ಗಾರ್ಡ ನೇಮಕ ಮಾಡಿ ದಿನನಿತ್ಯ ಅಕ್ರಮ ಮುಂದುವರಿಸಲಾಗುತ್ತಿದೆ ಎಂದು ಆಕಾಶ ಕ್ರಷರ್ ಮಾಲಿಕ ರವಿ ಹಂಜಿ ಅವರು ಆರೋಪವನ್ನು ಮಾಡುತ್ತಿದ್ದಾರೆ. ಎಲ್ಲ ದಾಖಲೆಗಳಿದ್ದರೂ ಸಹ ಟಾರ್ಗೆಟ್ ಮಾಡಿ ಪ್ರಭಾವಿ ರಾಜಕಾರಣಿಯ ಒತ್ತಡಕ್ಕೆ ಮಣಿದು ನನಗೆ ದಿನನಿತ್ಯ ತೊಂದರೆ ಕೊಡುತ್ತಿದ್ದಾರೆ ಎಂದು ಅಧಿಕಾರಿಗಳು ಮತ್ತು ಪೊಲೀಸರ ಮೆಲೆ ಆರೋಪವನ್ನು ಮಾಡುತ್ತಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ