ನೆರೆ ಪರಿಹಾರ ನೈಜ ಸಂತ್ರಸ್ತರಿಗೆ ತಲುಪದಿದ್ದರೇ ಉಗ್ರ ಹೋರಾಟ

ಬುಧವಾರ, 9 ಅಕ್ಟೋಬರ್ 2019 (17:17 IST)
ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳು ನೆರೆ ಪ್ರವಾಹಕ್ಕೆ ತುತ್ತಾಗಿವೆ.  ಜನರ ಜೀವನ ಅತಂತ್ರಗೊಂಡಿದೆ.

ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ಮತ್ತು ರಾಜಕೀಯ ಪಕ್ಷಗಳು ನೆರೆ ಸಂತ್ರಸ್ತರ ಸಮಸ್ಯೆಗಳಿಗೆ ಸ್ಪಂದಿಸದೇ ತಮ್ಮ ಅಧಿಕಾರದ ಕಿತ್ತಾಟದಲ್ಲಿ ತೊಡಗಿಕೊಂಡಿದ್ದಾರೆ. ನೆರೆ ಸಂತ್ರಸ್ತರನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಇದೀಗ ಕೇಂದ್ರದಿಂದ ಮಧ್ಯಂತರ ಪರಿಹಾರ ಬಂದಿದ್ದು, ಅದರಲ್ಲೂ ಅವ್ಯವಹಾರಗಳು ನಡೆಯುವ ಸಾಧ್ಯತೆ ಇದೆ. ಈ ಹಿನ್ನಲೆಯಲ್ಲಿ ಸರ್ಕಾರ ನೆರೆ ಸಂತ್ರಸ್ತರ ಪಟ್ಟಿಯನ್ನು ಪಾರದರ್ಶಕವಾಗಿ ಸಿದ್ಧಪಡಿಸಿ ಅರ್ಹ ಫಲಾನುಭವಿಗಳಿಗೆ ಪರಿಹಾರ ಒದಗಿಸುವ ಕೆಲಸ ಮಾಡಬೇಕು. ಹೀಗಂತ ಎಸ್.ಯು.ಸಿ.ಐ ನ ರಾಮಾಂಜನಪ್ಪ ಆಲ್ದಳ್ಳಿ ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ ಕಳೆದ 45 ವರ್ಷಗಳಿಂದ ಕಂಡು ಕೇಳದ ಭೀಕರ ಪ್ರವಾಹಕ್ಕೆ ಜನರು ತತ್ತರಿಸಿದ್ದಾರೆ. ಜನರ ಬದುಕು ಬೀದಿಗೆ ಬಂದಿದೆ. ಈ ಸಂದರ್ಭದಲ್ಲಿ ನೆರೆ ಹಾವಳಿ ಬಂದಾಗ ಸರ್ಕಾರ ನೆರೆ ಬಂದ ಜನರ ಸಂಕಷ್ಟಕ್ಕೆ ಸ್ಪಂದಿಸುವ ಬದಲು ಅಧಿಕಾರದ ಹಪಾಹಪಿಯಿಂದ ವಿಧಾನದಸಭೆಯಲ್ಲಿ ಠಿಕಾಣಿ ಹೂಡಿತು. ಜನರನ್ನು ಆಧುನಿಕ ಗುಲಾಮರಂತೆ ನೋಡಿದವು ಎಂದು ಆರೋಪಿಸಿದ್ರು.

ಇದೀಗ ಕೇಂದ್ರದಿಂದ ಮಧ್ಯಂತರ 1200 ಕೋಟಿ ನೆರೆ ಪರಿಹಾರ ಬಂದಿದೆ. ಆದರೆ ನೆರೆ ಪರಿಹಾರ ಒದಗಿಸುವಲ್ಲಿಯೂ ಭ್ರಷ್ಟಾಚಾರದ ವಾಸನೆ ಸುಳಿಯುತ್ತಿದ್ದು, ಈ ಹಿನ್ನಲೆಯಲ್ಲಿ ಸರ್ಕಾರ ಪಾರದರ್ಶಕವಾಗಿ ನಿಜವಾದ ನೆರೆ ಸಂತ್ರಸರ ಪಟ್ಟಿ ಮಾಡಿ  ಪರಿಹಾರ ಒದಗಿಸುವ ಕೆಲಸ ಮಾಡಬೇಕೆಂದ್ರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ