ಸತತ ನಾಲ್ಕನೇ ಮಗುವೂ ಹೆಣ್ಣುಮಗು ಜನಿಸಿತೆಂದು ಆತ್ಮಹತ್ಯೆ!

ಭಾನುವಾರ, 6 ನವೆಂಬರ್ 2022 (12:54 IST)
ಕೋಲಾರ : ಹೆಣ್ಣು ಮಗು ಹುಟ್ಟಿದ್ದಕ್ಕೆ ಮನನೊಂದು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನಲ್ಲಿ ನಡೆದಿದೆ.
 
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮದ ಲೋಕೇಶ್ (35) ಆತ್ಮಹತ್ಯೆಗೆ ಶರಣಾಗಿದ್ದಾನೆ. ಲೋಕೇಶ್ ಈಗಾಗಲೇ ಮೂರು ಮಕ್ಕಳಿಗೆ ತಂದೆಯಾಗಿದ್ದು, ಇದೀಗ ಜನಿಸಿರುವ ನಾಲ್ಕನೇ ಮಗುವು ಹೆಣ್ಣು ಆಗಿದ್ದರಿಂದ ಮನನೊಂದಿದ್ದ.

ಈ ಹಿನ್ನೆಲೆಯಲ್ಲಿ ಕಳೆದ ರಾತ್ರಿ ಮನೆಯಲ್ಲಿರುವ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ