ಮನಸ್ಸು ಸರಿಯಿಲ್ಲವೆಂದು ಗೃಹಿಣಿ ಹೀಗೆ ಮಾದ್ಕೊಳೋದಾ: ಆ 10 ತಿಂಗಳ ಮಗುವಿನ ಗತಿ ಏನು?

ಗುರುವಾರ, 14 ಸೆಪ್ಟಂಬರ್ 2023 (09:21 IST)
ಯಾದಗಿರಿ : ಹಲವು ದಿನಗಳಿಂದ ನನಗೆ ಮನಸ್ಸು ಸರಿಯಾಗಿಲ್ಲವೆಂದು ಬಳಲುತ್ತಿದ್ದ ಗೃಹಿಣಿಯೊಬ್ಬಳು 10 ತಿಂಗಳ ಮಗುವನ್ನ ಬಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಕೊಂಗಂಡಿ ಗ್ರಾಮದಲ್ಲಿ ನಡೆದಿದೆ.

ಕೊಂಗಂಡಿ ಗ್ರಾಮದ ಸೌಂದರ್ಯ ಮಠಪತಿ (25) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಸೌಂದರ್ಯ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಮನೆಯವರು ಮಾಹಿತಿ ನೀಡಿದ್ದಾರೆ.

ಹೆರಿಗೆಯಾದ ನಂತರ 6 ತಿಂಗಳವರೆಗೆ ಸೌಂದರ್ಯ ಚೆನ್ನಾಗಿಯೇ ಇದ್ದಳು. ಆದರೆ ಮಗು 6 ತಿಂಗಳು ಆದ್ಮೇಲೆ ಗಂಡನ ಮನೆಗೆ ಬಂದಿದ್ದ ಆಕೆ ತನ್ನ ಮನಸ್ಸು ಸರಿಯಾಗಿಲ್ಲವೆಂದು ಚಡಪಡಿಸುತ್ತಿದ್ದಳು. 

ಇದೇ ಕಾರಣಕ್ಕೆ 10 ತಿಂಗಳ ಮಗುವನ್ನು ತವರು ಮನೆಯಲ್ಲಿ ಬಿಟ್ಟು ಬಂದಿದ್ದಳು. ಕೊಂಗಂಡಿ ಗ್ರಾಮದ ಗಂಡನ ಮನೆಯಲ್ಲಿ ಮಾವ, ಗಂಡನೊಂದಿಗೆ ವಾಸವಾಗಿದ್ದ ಸೌಂದರ್ಯ, ಎಂದಿನಂತೆ ಸಹಜವಾಗಿ ಇರಲಿಲ್ಲ. ಮಾನಸಿಕವಾಗಿ ಖಿನ್ನತೆಯಿಂದ ಬಳಲುತ್ತಿದ್ದಳು ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ