ಕಳೆದೊಂದು ವರ್ಷದಿಂದ ಅವರಿಬ್ಬರು ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಪ್ರೀತಿಸಿದ್ರು. ಮದ್ವೆ ಮಾಡಿಕೊಳ್ಳುವುದಕ್ಕೂ ನಿರ್ಧರಿಸಿದ್ರಂತೆ . ಮದ್ವೆಯೂ ಆಯ್ತು ಅಷ್ಟಾಗಿದ್ರೆ ಮುಗೀತಿತ್ತೆನೋ . ಆದ್ರೆ ಅದರ ಮುಂದುವರಿದ ಸರಣಿಯೇ ಇಂಟರೆಷ್ಟಿಂಗ್ .. ಅದು ಮದ್ವೆಯೇ ಅಲ್ಲ , ಫೋಟೋಗಳೆಲ್ಲಾ ಶಾರ್ಟ್ ಮೂವಿದ್ದು ಎಂಬ ಅಲಿಗೇಷನ್ ಶುರುವಾಗಿದೆ. ಧರಣಿ ಹಾಗು ಸುರೇಶ್ ಎಂಬಿಬ್ಬರ ನಡುವೆ ನಡೆದ ಪ್ರಹಸನವಿದು. ಮದ್ವೆಯಾದ ಕೇವಲ ಐದೇ ದಿನಗಳಲ್ಲಿ ಪತಿ ಸುರೇಶ್ ಪರಾರಿಯಾಗಿದ್ದಾನೆಂದು ಪತ್ನಿ ಧರಣಿಯ ಆರೋಪ. ಆದ್ರೆ ಅವರಿಬ್ಬರ ಒಂದಷ್ಟು ಫೋಟೋಗಳಿವೆ ಅದನ್ನ ನೋಡಿದ್ರೆ ನಿಜಕ್ಕೂ ಇಬ್ಬರು ಮದ್ವೆಯಾಗಿದ್ದಾರೆಂಬ ಅನಿಸಿಕೆ ಮೂಡುತ್ತೆ. ಪತಿ ಸುರೇಶ್ ಹೇಳುವ ಪ್ರಕಾರ ನಮ್ಮದು ಮದ್ವೆಯೇ ಅಲ್ಲ ಅದೊಂದು ಶಾರ್ಟ್ ಮೂವಿಗಾಗಿ ನಡೆಸಿದ ಫೋಟೋ ಶೂಟ್ ಅಂತೆ
ನ್ಯಾಯ ಕೇಳೋದಕ್ಕೆ ಹೋದರೆ ಬೆದರಿಕೆ ಹಾಕುವಂತಹ ಕೆಲಸ ಮಾಡ್ತಾರೆ ಎಂದು ಉಮೇಶ್ ಸಹೋದರ ಆರೋಪಿಸುತ್ತಾನೆ. ಇನ್ನು ಧರಣಿ ಮತ್ತು ಸುರೇಶ್ ಇಬ್ಬರೂ ಕೆ.ಆರ್ ಪುರಂ ನಿವಾಸಿ..ಸುರೇಶ್ ರಿಯಲ್ ಎಸ್ಟೇಟ್ ಕೆಲಸ ಮಾಡಿಕೊಂಡಿದ್ದಿದ್ರೆ..ಧರಣಿ ಹಲಸೂರಿನಲ್ಲಿರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದಳು.ಜಾತ್ರೆಗೆ ಹೋಗಿದ್ದಾಗ ಇಬ್ಬರ ಪರಿಚಯವಾಗಿದೆ..ಪರಿಚಯ ಪ್ರೀತಿಗೆ ತಿರುಗಿದೆ..ಒಂದು ವರ್ಷ ಪರಸ್ಪರ ಪ್ರೀತಿಸುತ್ತಿದ್ದರಂತೆ ಜೋಡಿ..ಊರೂರು ಸುತ್ತಾಡಿದ್ದಾರೆ..ಫೆಬ್ರವರಿ 13 ರಂದು ಕನಕಪುರದ ಕಬ್ಬಾಳಮ್ಮ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ.ಮದುವೆಯ ಬಳಿಕ ನೇರವಾಗಿ ಚೆನ್ನೈಗೆ ತೆರಳಿದ ದಂಪತಿ, ಫೆಬ್ರವರಿ 17 ವರೆಗೂ ಒಟ್ಟಿಗೆ ಇದ್ದಾರೆ..ಆದರೆ ಸುರೇಶ್ ಮನೆಯವರು 18 ಕ್ಕೆ ಸಂಪ್ರದಾಯದಂತೆ ನಿನ್ನನ್ನ ಮನೆ ತುಂಬಿಸಿಕೊಳ್ತಿವಿ ಎಂದು ಸುರೇಶ್ ನನ್ನ ಕರೆದುಕೊಂಡು ಹೋಗಿದ್ದರಂತೆ.ಅದಾದ ಬಳಿಕ ನಡದಿದ್ದೆ ಅಸಲಿ ಸಂಗತಿ. ಜಾತಿ ವಿಚಾರವನ್ನ ಮುಂದಿಟ್ಟುಕೊಂಡು ಹುಡುಗಿ ಬೇರೆ ಜಾತಿಯಾದ ಮನೆಯಲ್ಲಿ ಒಪ್ಪುತ್ತಿಲ್ಲ ಎಂದು ಸ್ವತಃ ಸುರೇಶ್ ಹೇಳಿದ್ದನಂತೆ. ಇವೆಲ್ಲಾ ಮಾತುಕತೆ, ಸಂಘರ್ಷದ ಬಳಿಕ ಪೊಲೀಸರ ಮುಂದೆ ಬೇರೆಯದೇ ನಾಟಕವಾಡಿದ್ದಾನಂತೆ. ಅದು ಕೇವಲ ಶಾರ್ಟ್ ಮೂವೀಗೆ ತೆಗೆಸಿಕೊಂಡಿರುವ ಫೋಟೋವಷ್ಟೆ ನಾನು ಮದ್ವೆಯಾಗಿಲ್ಲ ಎಂದು ಹೇಳಿಕೆ ನೀಡಿದ್ದಾನೆ.
ಇಲ್ಲಿ ಪೊಲಿಸರು ಸತ್ಯಾಸತ್ಯತೆಯನ್ನ ಪರಿಶೀಲನೆ ನಡೆಸಬೇಕಿದೆ. ಇಲ್ಲಿ ಇಬ್ಬರ ಭವಿಷ್ಯ ಅಡಗಿದೆ. ಮದುವೆ ನಿಜವೇ ಆಗಿದ್ದರೆ ಅವರಿಬ್ಬರ ನಡುವೆ ಸಂಧಾನ ನಡೆಸಿ ಒಂದೊಳ್ಳೆ ಜೀವನ ನಡೆಸಲು ಅವಕಅಶ ನೀಡಿಬೇಕಿದೆ. ಸದ್ಯ ಈ ಪ್ರಕರಣವನ್ನ ಕೆ ಆರ್ ಪುರ ಹಾಗು ಹಲಸೂರು ಪೊಲೀಸರು ಯಾವ ರೀತಿ ಹ್ಯಾಂಡಲ್ ಮಾಡ್ತಾರೆ ಎಂಬುದನ್ನ ಕಾದು ನೋಡಬೇಕಿದೆ.