ಹಕ್ಕು ಪತ್ರ ವಿತರಣೆಗೆ 15 ದಿನ ಡೆಡ್ ಲೈನ್ ನೀಡಿದ ಸಚಿವ

ಗುರುವಾರ, 4 ಜುಲೈ 2019 (14:10 IST)
ಸರ್ಕಾರಿ ಜಮೀನು ಕಬಳಿಕೆ ಮಾಡಿಕೊಂಡವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಒತ್ತುವರಿ ಜಮೀನನ್ನು  ಸರ್ಕಾರದ ವಶಕ್ಕೆ ಪಡೆಯಿರಿ ಎಂದು ಕಂದಾಯ ಸಚಿವ ಖಡಕ್ ಸೂಚನೆ ನೀಡಿದ್ದಾರೆ.

ಸಾಗುವಳಿ ಭೂಮಿ ಒತ್ತುವರಿ ಸಕ್ರಮ ಪ್ರಕರಣಗಳು, ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಜಾಗ ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿಕೊಂಡವರಿಗೆ ಸಕ್ರಮಗೊಳಿಸುವ ಕುರಿತು ಬಂದಿರುವ ಅರ್ಜಿಗಳ ಪೈಕಿ ಈಗಾಗಲೆ ವಿಲೇವಾರಿ ಮಾಡಿರುವ ಪ್ರಕರಣಗಳಲ್ಲಿ ಇನ್ನು ಹಕ್ಕು ಪತ್ರ, ಸಾಗುವಳಿ ಚೀಟಿ ನೀಡದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಸಚಿವರು.

ಮುಂದಿನ 15 ದಿನದಲ್ಲಿ ಎಲ್ಲಾ ಫಲಾನುಭವಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಮತ್ತು ಸ್ಥಳೀಯ ಚುನಾಯಿತ ಪ್ರತಿನಿಧಿಗಳ ಸಮ್ಮುಖದಲ್ಲಿ ಹಕ್ಕು ಪತ್ರ, ಸಾಗುವಳಿ ಚೀಟಿ ವಿತರಣೆ ಮಾಡಬೇಕು ಎಂದು ಸಚಿವ ಆರ್.ವಿ.ದೇಶಪಾಂಡೆ ಆದೇಶ ನೀಡಿದ್ರು.

ಕಲಬುರಗಿ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ನಿಮ್ಮ ಸ್ವಂತದ ಜಮೀನು ಇನ್ನೊಬ್ಬರ ಪಾಲಾದರೆ ಸುಮ್ಮನಿರುವಿರಾ? ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು ಯಾವುದೇ ಮುಲಾಜಿಲ್ಲದೆ ಮತ್ತು ರಾಜಕೀಯ ಒತ್ತಡಕ್ಕೂ ಮಣಿಯದೇ ಒತ್ತುವರಿ ಜಮೀನು ತೆರವಿಗೆ ಮುಂದಾಗಿ ಎಂದು . ಸಚಿವರು ಖಡಕ್ ಸೂಚನೆ ನೀಡಿದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ