‘ಪ್ರಾಮಾಣಿಕರು ಎನ್ನುವವರೇ ಅತೀ ಭ್ರಷ್ಟರು- ಪ್ರಧಾನಿ ನರೇಂದ್ರ ಮೋದಿ

ಭಾನುವಾರ, 6 ನವೆಂಬರ್ 2022 (18:19 IST)
ನಾವು ಖಟ್ಟರ್‌ ಪ್ರಾಮಾಣಿಕರು ಎಂದು ಯಾರು ಹೇಳಿಕೊಂಡು ತಿರುಗುತ್ತಾರೋ ಅವರೇ ಅತೀ ಭ್ರಷ್ಟರೂ, ಸಮಾಜವನ್ನು ವಿಭಜಿಸುವವರೂ ಅವರೇ ಆಗಿರುತ್ತಾರೆ. ಅಂಥ ಸ್ವಾರ್ಥಿಗಳ ಬಗ್ಗೆ ಎಚ್ಚರವಿರಲಿ ಎಂದು ಹಿಮಾಚಲ ಪ್ರದೇಶದ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಲಹೆ ನೀಡಿದ್ದಾರೆ.  ಹಿಮಾಚಲ ಪ್ರದೇಶದ ಸೋಲನ್‌ ಮತ್ತು ಸುಂದರ್‌ನಗರದಲ್ಲಿ ಬೃಹತ್‌ ಪ್ರತಿಭಟನಾ ರ್‍ಯಾಲಿ ನಡೆಸಿದ ಪ್ರಧಾನಿ ಮೋದಿ, ರಾಜ್ಯದಲ್ಲಿ ಕಣದಲ್ಲಿರುವ ಆಮ್‌ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್‌ ವಿರುದ್ಧ ಟೀಕಾಪ್ರಹಾರ ನಡೆಸಿದರು. ಪ್ರಾಮಾಣಿಕರು ಎಂದು ಹೇಳಿಕೊಳ್ಳುವವರನ್ನು ನಂಬಬೇಡಿ ಎನ್ನುವ ಮೂಲಕ ಆಪ್‌ಗೆ ಪರೋಕ್ಷ ಟಾಂಗ್‌ ನೀಡಿದರು. ಇನ್ನು, ಕಾಂಗ್ರೆಸ್‌ ವಿರುದ್ಧ ಹರಿಹಾಯ್ದ ಅವರು ಕಾಂಗ್ರೆಸ್‌ ಎಂದರೇನೇ ಭ್ರಷ್ಟಾಚಾರ ಖಾತ್ರಿ ಎಂದರ್ಥ. ಅದು ಸ್ವಾರ್ಥ ರಾಜಕಾರಣ ಮತ್ತು ಸ್ವಜನಪಕ್ಷಪಾತದಲ್ಲಿ ಮುಳುಗಿದೆ. ಹಿಮಾಚಲವು ಸಣ್ಣ ರಾಜ್ಯ ಎಂಬ ಕಾರಣಕ್ಕೆ ಇಷ್ಟು ವರ್ಷ ಕಾಂಗ್ರೆಸ್‌ ಈ ರಾಜ್ಯವನ್ನು ನಿರ್ಲಕ್ಷಿಸುತ್ತ ಬಂತು. ರಕ್ಷಣಾ ಒಪ್ಪಂದದಲ್ಲಿ ಭ್ರಷ್ಟಾಚಾರ ಎಸಗುವ ಮೂಲಕ ಅನೇಕರ ಜೀವದ ಜತೆ ಆಟ ವಾಡಿತು ಎಂದು ಕಿಡಿಕಾರಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ