ತಿಂಗಳ ಬಳಿಕ ಶತಕ ದಾಟಿದ ಸೋಂಕಿನ ಸಂಖ್ಯೆ?

ಭಾನುವಾರ, 24 ಏಪ್ರಿಲ್ 2022 (13:25 IST)
ಬೆಂಗಳೂರು ನಗರದಲ್ಲಿ ಶನಿವಾರ 132 ಮಂದಿಯಲ್ಲಿ ಕೋವಿಡ್ ಪತ್ತೆಯಾಗಿದೆ. ಪಾಸಿಟಿವಿಟಿ ದರ ಶೇ.2.23ಕ್ಕೆ ಏರಿದೆ. 51 ಮಂದಿ ಚೇತರಿಸಿಕೊಂಡಿದ್ದಾರೆ.
 
ಕೋವಿಡ್ ಸಾವು ಘಟಿಸಿಲ್ಲ. ಸುಮಾರು ಒಂದು ತಿಂಗಳ ಬಳಿಕ ಮತ್ತೆ ನಗರದಲ್ಲಿ ದೈನಂದಿನ ಸೋಂಕಿತರ ಸಂಖ್ಯೆ ಶತಕ ದಾಟಿದೆ. ರಾಜ್ಯದ ದೈನಂದಿನ ಪ್ರಕರಣದಲ್ಲಿ ಶೇ.90ಕ್ಕಿಂತ ಹೆಚ್ಚು ಬೆಂಗಳೂರಿನಿಂದ ವರದಿ ಆಗುತ್ತಿದೆ.

ನಾಲ್ಕೈದು ದಿನಗಳಿಂದ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದರೂ ಕಂಟೈನ್ಮೆಂಟ್ ವಲಯಗಳು ಪತ್ತೆಯಾಗಿಲ್ಲ, ಸದ್ಯ 9 ಮಂದಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಒಬ್ಬರು ವೆಂಟಿಲೇಟರ್ ಸಹಿತ ತೀವ್ರ ನಿಗಾ ವಿಭಾಗದಲ್ಲಿ ದಾಖಲಾಗಿದ್ದಾರೆ. ಮೂವರು ಆಮ್ಲಜನಕ ಸಹಿತ ಹಾಸಿಗೆ ಮತ್ತು ಐವರು ಜನರಲ್ ವಾರ್ಡ್ನಲ್ಲಿ ದಾಖಲಾಗಿದ್ದಾರೆ.

ನಗರದ ಹೊರ ವಲಯದ ಬೆಳ್ಳಂದೂರು, ಹಗದೂರು, ಕೋರಮಂಗಲ, ವರ್ತೂರು, ಎಚ್ಎಸ್ಆರ್ ಬಡಾವಣೆ, ದೊಡ್ಡನೆಕ್ಕುಂದಿ, ಹೂಡಿ, ಕಾಡುಗೋಡಿ ವಾರ್ಡ್ಗಳಲ್ಲಿ ಹೆಚ್ಚು ಪ್ರಕರಣಗಳಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ