ಕರ್ತವ್ಯದ ಸಮಯದಲ್ಲಿಯೇ ಠಾಣೆಯಲ್ಲಿ ಮದ್ಯಪಾನ, ಜೂಜಾಡಿ ಗಲಾಟೆ ಮಾಡಿಕೊಂಡ ಪೊಲೀಸರು ಸಸ್ಪೆಂಡ್ ಆಗಿದ್ದಾರೆ.
ಕರ್ತವ್ಯದ ಸಮಯದಲ್ಲಿಯೇ ಠಾಣೆಯಲ್ಲಿ ಮದ್ಯಪಾನ, ಜೂಜಾಡಿ ಗಲಾಟೆ ಮಾಡಿಕೊಂಡ ಆರೋಪದ ಮೇಲೆ ತುಮಕೂರು ತಾಲ್ಲೂಕು ಹೆಬ್ಬೂರು ಠಾಣೆಯ ಎಎಸ್ಐ ಸೇರಿದಂತೆ ಮೂವರು ಪೇದೆಗಳನ್ನು ಪೊಲೀಸ್ ವರಿಷ್ಠಾಕಾರಿ ವಂಶಿಕೃಷ್ಣ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಎಎಸ್ಐ ರಾಮಚಂದ್ರಯ್ಯ, ಪೇದೆಗಳಾದ ಮಹೇಶ್, ಚೆಲುವರಾಜು, ಸಂತೋಷ್ ಅವರು ಕರ್ತವ್ಯದ ಸಮಯದಲ್ಲಿ ಹೆಬ್ಬೂರು ಠಾಣೆಯ ಮೇಲಿರುವ ಕೊಠಡಿಯಲ್ಲಿ ಮದ್ಯಪಾನ ಮಾಡಿ ಜೂಜಾಡಿ ಪರಸ್ಪರ ಹೊಡೆದಾಡಿಕೊಂಡಿರುವ ಬಗ್ಗೆ ಸಬ್ ಇನ್ ಸ್ಪೆಕ್ಟರ್ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದರು.
ಈ ವರದಿಯ ಆಧಾರ ಮೇಲೆ ಪೊಲೀಸ್ ವರಿಷ್ಠಾಧಿಕಾರಿಗಳು ನಾಲ್ವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.