ದಸರಾ ಘಟಸ್ಥಾಪನೆ ಸಸಿ ಬಿಡಲು ಹೋದವರ ದುರಂತ ಅಂತ್ಯ
ಹೈದ್ರಾಬಾದ್ ಪ್ರದೇಶ, ಉತ್ತರ ಕರ್ನಾಟಕ ಪ್ರದೇಶದಲ್ಲಿ ದಸರಾ ಹಬ್ಬದ ಅಂಗವಾಗಿ ನಡೆಯೋ ಘಟಸ್ಥಾಪನೆಯ ಮಾಡಿದ ಮೇಲೆ ಎದ್ದ ಸಸಿಯನ್ನು ಬಿಡೋದು ವಾಡಿಕೆ.
ಸಸಿಯನ್ನು ಹಬ್ಬ ಮುಗಿದ ಮೇಲೆ ನೀರಿರುವ ಪ್ರದೇಶದಲ್ಲಿ ವಿಸರ್ಜನೆ ಮಾಡ್ತಾರೆ. ಆದರೆ ಈ ಸಸಿ ಬಿಡುವುದೇ ಇಬ್ಬರ ಪಾಲಿಗೆ ಕರಾಳವಾಗಿ ಪರಿಣಮಿಸಿದೆ.
ಕಲಬುರಗಿಯ ಫರತಾಬಾದ್ ವ್ಯಾಪ್ತಿಯ ಕೊಳ್ಳೂರ ಗ್ರಾಮದಲ್ಲಿ ಸಸಿ ಬಿಡಲು ಕೆರೆಗೆ ತೆರಳಿದ್ದ ಯುವಕರಿಬ್ಬರು ನೀರುಪಾಲಾಗಿ ಸಾವನ್ನಪ್ಪಿದ್ದಾರೆ.
ನಿಂಗಯ್ಯ ಗುತ್ತೇದಾರ್, ಗೋಪಾಲ ಪಾಟೀಲ್ ಸಾವನ್ನಪ್ಪಿದ ಯುವಕರಾಗಿದ್ದಾರೆ. ಕೆರೆಯಲ್ಲಿ ಸಸಿ ಬಿಡಲು ಹೋದಾಗ ಮುಳುಗಿ ಸಾವನ್ನಪ್ಪಿದ್ದಾರೆ.