ರಾಷ್ಟ್ರಭಾಷೆ ಬಗ್ಗೆ ಹೊಸ ಬಾಂಬ್ ಸಿಡಿಸಿದ ಕೇಂದ್ರ ಮಂತ್ರಿ

ಮಂಗಳವಾರ, 17 ಸೆಪ್ಟಂಬರ್ 2019 (16:13 IST)
ಒಂದೇ ರಾಷ್ಟ್ರ ಒಂದೇ ಕಾನೂನು, ಒಂದೇ ಜಿಎಸ್ಟಿ ಎನ್ನುವಂತೆ ಒಂದೇ ರಾಷ್ಟ್ರ ಭಾಷೆ ಬಗ್ಗೆ ಕೇಂದ್ರ ಸಚಿವರೊಬ್ಬರು ಹೊಸ ಬಾಂಬ್ ಸಿಡಿಸಿದ್ದಾರೆ.

ಒಂದೇ ರಾಷ್ಟ್ರಭಾಷೆ ಇರುವುದರಲ್ಲಿ ತಪ್ಪಿಲ್ಲ. ಇದರಿಂದ ಪ್ರಾದೇಶಿಕ ಬಾಷೆಗಳಿಗೆ ಯಾವುದೇ ತೊಂದರೆ ಇಲ್ಲವೆಂದು ರಾಜ್ಯ ರೈಲ್ವೆ ಇಲಾಖೆ ಖಾತೆಯ ಕೇಂದ್ರ ಸಚೀವ ಸುರೇಶ ಅಂಗಡಿ ಹೇಳಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿ, ಡಿಕೆಶಿವಕುಮಾರ್ ಪ್ರಕರಣ ಬಗ್ಗೆ ಮಾತನಾಡಿ ಐಟಿ ಮತ್ತು ಇಡಿ ಅಧಿಕಾರಿಗಳು ಸಂವಿಧಾನ ಬದ್ಧ ಕೆಲಸ ಮಾಡುತ್ತಿದ್ದಾರೆ. ಅನುಮಾನ ಬಂದವರ ಮೇಲೆ ತನಿಖೆ ನಡೆಸುತ್ತಿದ್ದಾರೆ. ಇದರ ವಿರುದ್ಧ ಪ್ರತಿಭಟಿಸಿ ಸಾರ್ವಜನಿಕರ ಆಸ್ತಿ ಹಾಳು ಮಾಡುವುದನ್ನು ಕಾಂಗ್ರೆಸ್ ನೀತಿಯಾಗಿಸಿಕೊಂಡಿದೆ  ಎಂದು ದೂರಿದ್ರು.

ಈಸ್ಟ್ ಇಂಡಿಯಾ ಕಂಪನಿ ಬಂದು ನಮ್ಮಲ್ಲೇ ಕದನ ಸೃಷ್ಟಿಸಿ ಅಧಿಕಾರ ನಡೆಸಿತು. ಈಗ ಇಟಲಿ ಕಾಂಗ್ರೆಸ್ ಅದನ್ನೇ ಮಾಡುತ್ತಿದೆ. ತಪ್ಪು ಮಾಡದಿದ್ದರೆ ಹೆದರುವ ಅವಶ್ಯಕತೆ ಇಲ್ಲ.

ದೇಶದ ಪ್ರಧಾನ ಮಂತ್ರಿ ಮತ್ತು ಅಮಿತ್ ಷಾ  ವಿರುದ್ಧ ಅವಾಚ್ಯ ಪದಗಳ ಬಳಕೆ ಮಾಡುವುದನ್ನು ನೋಡಿದರೆ ಪ್ರಧಾನಮಂತ್ರಿಗೆ ಅವರು ಕೊಡುವ ಗೌರವ ಏನು ಎಂದು ಎದ್ದು ಕಾಣುತ್ತದೆ. ಇದು ಒಳ್ಳೆಯ ಲಕ್ಷಣವಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಿದರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ