ಹಾಲು ಉತ್ಪಾದನೆಯಲ್ಲಿ ಈಗ ಕೊಂಚ ಇಳಿಕೆ

ಭಾನುವಾರ, 29 ಜನವರಿ 2023 (21:12 IST)
ಹಾಲು ಉತ್ಪಾದನೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನದಲ್ಲಿರುವ ಬಮೂಲ್  ಹಾಲು ಉತ್ಪಾದನೆಯಲ್ಲಿ ಈಗ ಕೊಂಚ ಇಳಿಕೆ ಕಂಡಿದೆ . ಈ ಹಿಂದೆ ಬೆಂಗಳೂರು ಹಾಲು ಉತ್ಪಾದಕರ ಒಕ್ಕೂಟವು ಪ್ರತಿ ಸುಮಾರು 18 ಲಕ್ಷ ಲೀಟರ್ ಹಾಲು ಉತ್ಪಾದಿಸುತ್ತಿತ್ತು. ಆದರೆ, ಈಗ ಅದು 14 ಲಕ್ಷ ಲೀಟರ್‌ಗೆ ಇಳಿಕೆಯಾಗಿದೆ.
ಹಸುಸುಗಳಲ್ಲಿ ಕಂಡುಬಂದ ಚರ್ಮಗಂಟು ರೋಗ, ಅಧಿಕ ಚಳಿ, ಹಸಿರು ಮೇವು ದೊರೆಯದೆ ಇರುವ ಕಾರಣಗಳಿಂದಾಗಿ ಮೂರು ತಿಂಗಳುಗಳಿಂದ ಬಮೂಲ್ ಹಾಲು ಉತ್ಪಾದನೆಯಲ್ಲಿ ಇಳಿಕೆಯಾಗಿದೆ.  ಈ ಎಲ್ಲ ಕಾರಣಗಳಿಂದಾಗಿ ಹಾಲು ಪೂರೈಕೆ ಕ್ಷೀಣಿಸಿದ್ದು,ಈ ಹಿಂದೆ ಹಾಲು ಉತ್ಪಾದಕರ ಒಕ್ಕೂಟ ನಿತ್ಯ 18 ಲಕ್ಷ ಲೀ. ಹಾಲು ಸಂಗ್ರಹಿಸುತ್ತಿತ್ತು. ಅದರಲ್ಲಿ ಹೆಚ್ಚುವರಿ ಹಾಲಿನ್ನು ಹಾಲಿನಪೌಡರ್, ಮತ್ತಿತರರ ಹಾಲಿನ ಉತ್ಪನ್ನಗಳ ತಯಾರಿಕೆಗೆ ಬಳಸಲಾಗುತ್ತಿತ್ತು. ಇದೀಗ ಪ್ರತಿದಿನ 14 ಲಕ್ಷ ಲೀಟರ್ ಹಾಲು  ಉತ್ಪಾದನೆ ಯಾಗುತ್ತಿದ್ದು ಇದರಲ್ಲಿ 10 ಲಕ್ಷ ಲೀ ಹಾಲನ್ನು ಗ್ರಾಹಕರಿಗೆ ಪೂರೈಕೆ ಮಾಡಲಾಗುತ್ತಿದ್ದು,ಇನ್ನುಳಿದ ಹಾಲನ್ನು ಮೊಸರು ಹಾಲಿನ ಪೌಡರ್ ಇನ್ನಿತರ ಉತ್ಪನ್ನಗಳ ತಯಾರಿಕೆಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಬಮೂಲ್ ಅಧಿಕಾರಿಗಳು ತಿಳಿಸಿದ್ದಾರೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ