ಹಿರಿಯ ಮುತ್ಸದ್ದಿ, ಮಾಜಿ ಶಾಸಕ ಇನ್ನಿಲ್ಲ
ಹಿರಿಯ ರಾಜಕಾರಣಿ ಹಾಗೂ ಮಾಜಿ ಶಾಸಕ ಕೆ.ಮಲ್ಲಪ್ಪ ಇಂದು ಮುಂಜಾನೆ ದಾವಣಗೆರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು.
ದೇವರಾಜ್ ಅರಸ್ ಹಿಂದುಳಿದ ವರ್ಗಗಳ ನಿಗಮ ಹಾಗೂ ಬಯಲು ಸೀಮೆಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಕುಸ್ತಿ ಜೀರ್ಣೋದ್ಧಾರಕ ಸಂಘದ ಅಧ್ಯಕ್ಷರಾಗಿ ಹೆಸರುವಾಸಿ ಆಗಿದ್ದ ಮಲ್ಲಪ್ಪನವರು ದಾವಣಗೆರೆಯಲ್ಲಿ ಪ್ರತಿವರ್ಷ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿ ಆಯೋಜಿಸುತ್ತಿದ್ದರು.