ಮಾಸ್ಕ್ ಹಾಕದಿದ್ರೆ ದಂಡವಿಲ್ಲ

ಮಂಗಳವಾರ, 29 ಮಾರ್ಚ್ 2022 (14:41 IST)
ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆಯೂ ಸಂಪೂರ್ಣವಾಗಿ ಕಡಿಮೆಯಾಗಿರುವ ಹಿನ್ನೆಲೆ, ಮಾಸ್ಕ್ ಧರಿಸುವ ಕಡ್ಡಾಯ ನಿಯಮದಲ್ಲಿ ಸಡಿಲಿಕೆ ಮಾಡಲಾಗಿದೆ. ಹೀಗಾಗಿ ನಗರದಲ್ಲಿ ಮಾಸ್ಕ್ ಧರಿಸದವರಿಗೆ, ದೈಹಿಕ ಅಂತರ ಕಾಪಾಡದವರಿಗೆ ದಂಡ ವಿಧಿಸುತ್ತಿಲ್ಲ. ಬದಲಾಗಿ, ಮಾಸ್ಕ್ ಧರಿಸುವಂತೆ ಜಾಗೃತಿ ಮೂಡಿಸುವ ಕೆಲಸ ಮಾತ್ರ ನಡೆಸಲು ಮೌಖಿಕ ಸೂಚನೆ ನೀಡಲಾಗಿದೆ. ಪ್ರತಿನಿತ್ಯ ಮಾಸ್ಕ್ ದಂಡ  ಹಾಗೂ ಸಾಮಾಜಿಕ ಅಂತರ ಕಾಯದ ಜನರಿಗೆ ದಂಡ ವಿಧಿಸುತ್ತಿದ್ದ ಮಾರ್ಷಲ್ಸ್, ದಿನವೊಂದಕ್ಕೆ ಒಂದೂವರೆ ಲಕ್ಷ ರೂಪಾಯಿಗೂ ಅಧಿಕ ದಂಡ ಸಂಗ್ರಹಿಸುತ್ತಿದ್ದರು. ಕೊವಿಡ್​​ ಹೆಚ್ಚು ಇದ್ದ ದಿನಗಳಲ್ಲಿ, 500, 600 ಪ್ರಕರಣಗಳಿಗೆ ದಂಡ ಹಾಕಲಾಗ್ತಿತ್ತು. ಸದ್ಯ 20, 30 ಜನರಿಗೆ ಮಾತ್ರ ದಂಡ ವಿಧಿಸಲಾಗ್ತಿದೆ. ಇನ್ನು ದೈಹಿಕ ಅಂತರ ಪ್ರಕರಣಕ್ಕೆ ದಂಡ ಹಾಕುವುದನ್ನು ಮಾರ್ಚ್ 7ರಿಂದ ಸಂಪೂರ್ಣವಾಗಿ ನಿಲ್ಲಿಸಲಾಗಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ