ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ: ತ.ನಿಯೋಗಕ್ಕೆ ಸ್ಪಷ್ಟನೆ

ಶನಿವಾರ, 1 ಏಪ್ರಿಲ್ 2017 (17:08 IST)
ಕಾವೇರಿ ನದಿ ನೀರು ವಿವಾದ ಕುರಿತಂತೆ ತಮಿಳುನಾಡು ಮುಖ್ಯ ಕಾರ್ಯದರ್ಶಿ ನೇತೃತ್ವದ ನಿಯೋಗ ಇಂದು ರಾಜ್ಯದ ಮುಖ್ಯಕಾರ್ಯದರ್ಶಿ ಸುಭಾಷ್ ಕುಂಟಿಯಾರೊಂದಿಗೆ ಚರ್ಚೆ ನಡೆಸಿದೆ.
 
ನ್ಯಾಯಾಧೀಕರಣದ ಆದೇಶದನ್ವಯ ನೀರು ಬಿಡಿ ಎಂದು ಕೇಳುತ್ತಿಲ್ಲ. ತಮಿಳುನಾಡಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗಿದ್ದರಿಂದ 3 ಟಿಎಂಸಿ ನೀರು ಬಿಡುವಂತೆ ತಮಿಳುನಾಡು ನಿಯೋಗ, ಕುಂಟಿಯಾ ಅವರಿಗೆ ಮನವಿ ಮಾಡಿತು.
 
ಆದರೆ, ರಾಜ್ಯದಲ್ಲಿ ಭೀಕರ ಬರಗಾಲವಿದೆ. ಕುಡಿಯುವ ನೀರಿಗೂ ಸಂಕಷ್ಟದ ಸ್ಥಿತಿ ಇರುವುದರಿಂದ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂದು ರಾಜ್ಯದ ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ ಕುಂಟಿಯಾ ಸ್ಪಷ್ಟಪಡಿಸಿದ್ದಾರೆ.
 
ರಾಜ್ಯದ ನಾಲ್ಕು ಜಲಾಶಯಗಳಲ್ಲಿ 8.8 ಟಿಎಂಸಿ ನೀರಿದೆ, ನಮಗೆ ಪ್ರತಿ ತಿಂಗಳು 3 ಟಿಎಂಸಿ ನೀರು ಬೇಕಾಗುತ್ತದೆ. ಮಳೆ ಬಂದಲ್ಲಿ ಮಾತ್ರ ತಮಿಳುನಾಡಿಗೆ ನೀರುಬಿಡಬಹುದು ಎಂದು ತಮಿಳುನಾಡು ನಿಯೋಗಕ್ಕೆ ಮನವರಿಕೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ