ಅಬ್ಬಾ.. ಇದು ಎಷ್ಟು ಉದ್ದದ ಧ್ವಜ ನೋಡಿ..!

ಶುಕ್ರವಾರ, 2 ಡಿಸೆಂಬರ್ 2016 (09:01 IST)
ರಾಯಚೂರು: ಬಿಸಿಲ ನಾಡಿನಲ್ಲಿ ಕಣ್ಣು ಕಿವಿ ತಂಪಾಗಿಸಿಕೊಳ್ಳಲು ಬಿಸಿಲ ನಾಡು ರಾಯಚೂರಿನಲ್ಲಿ 82 ನೇ ಸಾಹಿತ್ಯ ಸಮ್ಮೇಳನ ನಡೆಯಲಿದೆ.  ನಾಡೋಜ ಸಾಹಿತಿ ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮ್ಮೇಳನದ ಮುಖ್ಯ ಆಕರ್ಷಣೆ 3500 ಅಡಿ ಉದ್ದದ ನಾಡಧ್ವಜ. ಇದು ಮೆರವಣಿಗೆಯಲ್ಲಿ ಪ್ರದರ್ಶನಗೊಳ್ಳಲಿದೆ.

ಬೆಳಗ್ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅಕ್ಷರ ಜಾತ್ರೆಗೆ ಅಧಿಕೃತ ಚಾಲನೆ ನೀಡಲಿದ್ದಾರೆ. ನಗರದ ಕೃಷಿ ವಿವಿಯಲ್ಲಿ ನಡೆಯಲಿರುವ ಅಕ್ಷರ ಜಾತ್ರೆಯಲ್ಲಿ ಈ ಬಾರಿ 80 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ನುಡಿ ಹಬ್ಬಕ್ಕೆ ರಾಯಚೂರು ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ.

ಇಂದು ಧ್ವಜಾರೋಹಣ, ಸಮ್ಮೇಳನಾಧ್ಯಕ್ಷರ ಮೆರವಣಿಗೆ, ಅಧ್ಯಕ್ಷರ ಭಾಷಣ ನಡೆಯಲಿದೆ. 1.90 ಕೋಟಿ ರೂ. ವೆಚ್ಚದಲ್ಲಿ 30 ಸಾವಿರ ಮಂದಿ ಕೂರಲು ಸಾಮರ್ಥ್ಯವಿರುವ ವೇದಿಕೆ ಸಿದ್ಧಪಡಿಸಲಾಗಿದ್ದು, ಎಲ್ಲಾ ಪ್ರತಿನಿಧಿಗಳಿಗೆ ನಗರದ ವಿವಿದೆಡೆ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.

ಸಮ್ಮೇಳನಕ್ಕೆ ಬರುವವರಿಗೆ ಉತ್ತರ ಕರ್ನಾಟಕ ಶೈಲಿಯ ಊಟ ಲಭ್ಯವಿದೆ. ಖಡಕ್ ರೊಟ್ಟಿ, ಎಣ್ ಗಾಯಿ, ಮೈಸೂರು ಪಾಕ್, ಹುಗ್ಗಿ, ಮಾದ್ಲಿ ಶೇಂಗಾ ಚಟ್ನಿ ಸೇರಿದಂತೆ ಹಲವು ಸಾಂಪ್ರದಾಯಿಕ ಅಡುಗೆ ಸಿದ್ಧವಿದೆ. ಒಟ್ಟಾರೆ ಮೂರು ದಿನಗಳ ಕಾಲ ನಡೆಯಲಿರುವ ಅಕ್ಷರ ಜಾತ್ರೆಯಲ್ಲಿ ಸಾಹಿತ್ಯಕ್ಕೆ ಸಂಬಂಧಿಸಿದ ಚಿಂತನ ಮಂಥನಗಳು ನಡೆಯಲಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ