ಬೆಂಗಳೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಶಾಸಕ ಜಮೀರ್ ಅಹ್ಮದ್ ಖಾನ್, ಬಿಜೆಪಿಗೆ ರಾಜ್ಯದ ಜನರು ಬಹುಮತ ನೀಡಿಲ್ಲ. ಕಳೆದ ಬಾರಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಬಂದ್ರೂ 104 ಸೀಟ್ ಬಂತು. ಈ ಬಾರಿ ಕೂಡ ಮೋದಿ, ಅಮಿತ್ ಶಾ ಬಂದ್ರೂ ಏನು ನಡೆಯಲ್ಲ ಎಂದು ಲೇವಡಿ ಮಾಡಿದ್ರು. ಕೈ ನಾಯಕರ ರಾಜ್ಯ ಪ್ರವಾಸ ವಿಚಾರವಾಗಿ ಮಾತನಾಡಿದ ಅವರು, ಜನಾಭಿಪ್ರಾಯ ಈ ಬಾರಿ ಕಾಂಗ್ರೆಸ್ ಪರವಾಗಿದೆ. ನಮ್ಮ ಪಕ್ಷದವರು ಸಾಕಷ್ಟು ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಚುನಾವಣೆಯಲ್ಲಿ ಗೆಲ್ಲಲು BJP ನೂರಾರು ಕೋಟಿ ಖರ್ಚು ಮಾಡುತ್ತಿದೆ. ಒಂದು ಕ್ಷೇತ್ರದಲ್ಲಿ ಗೆಲ್ಲಲು ನೂರು ಕೋಟಿ ಖರ್ಚು ಮಾಡಿದರೂ BJP ಅಧಿಕಾರಕ್ಕೆ ಬರಲ್ಲ. ದುಡ್ಡಿನ ಮೇಲೆ ಚುನಾವಣೆ ನಡೆಯಲ್ಲ, ಬಿಜೆಪಿಗೆ ಮುಸ್ಲಿಮರು ಮತ ಹಾಕಲ್ಲ ಎಂದ್ರು. ನಾವು ಪ್ರಮಾಣ ವಚನ ಮಾಡಿದಾಗ ಎಲ್ಲ ಸಮುದಾಯವನ್ನು ಒಟ್ಟಾಗಿ ತೆಗೆದುಕೊಂಡು ಹೋಗ್ತೇವೆ ಅಂತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ಗೆ ತಿರುಗೇಟು ನೀಡಿದ್ದಾರೆ.