ನೈಸ್ ರಸ್ತೆಯಲ್ಲಿ ಕಾಂಗ್ರೆಸ್ ನವರು ಮಾಡಿದ್ರು ಈ ಕೆಲಸ

ಶನಿವಾರ, 7 ಸೆಪ್ಟಂಬರ್ 2019 (18:24 IST)
ಕಾಂಗ್ರೆಸ್‌ನ ಪ್ರಭಾವಿ ನಾಯಕ ಡಿಕೆ ಶಿವಕುಮಾರ್ ರನ್ನು ಬಂಧಿಸಿದ ಜಾರಿ ನಿರ್ದೇಶನಾಲಯ ಕ್ರಮವನ್ನು ಖಂಡಿಸಿ  ಕಾಂಗ್ರೆಸ್ ಬೆಂಬಲಿಗರು ಹಾಗೂ ಕಾರ್ಯಕರ್ತರು  ಪ್ರತಿಭಟನೆ ಮುಂದುವರಿಸಿದ್ದಾರೆ.

ಬನ್ನೇರು ಘಟ್ಟ- ಗೊಟ್ಟಿಗೆರೆ ನೈಸ್ ರಸ್ತೆಯಲ್ಲಿ ಪ್ರತಿಭಟನೆಯನ್ನು ಮಾಡಿದ್ದಾರೆ. ಇನ್ನು ಡಿಕೆ ಶಿವಕುಮಾರ್ ಬೆಂಬಲಿಗರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ನೈಸ್ ರಸ್ತೆ  ತಡೆದು  ರಸ್ತೆಯಲ್ಲಿ ಅಮಿತ್ ಶಾ ಮತ್ತು ನರೇಂದ್ರ ಮೋದಿಯವರ ಅಣುಕು ಶವಯಾತ್ರೆ ಮಾಡಿದ್ರು.

ಭಾವಚಿತ್ರಕ್ಕೆ ಭೂತ ದಹನ ಮಾಡುವ ಮೂಲಕ ತಮ್ಮ  ಆಕ್ರೋಶ ಹೊರಹಾಕಿದ್ದಾರೆ. ರಾಜಕೀಯ ದುರುದ್ದೇಶದಿಂದ ಇಡಿ  ಅಧಿಕಾರಿಗಳು ವಿಚಾರಣೆಗೆಂದು ಕರೆಸಿ ವಶಕ್ಕೆ ಪಡೆದಿರುವುದು ನೋವಿನ ಸಂಗತಿ. ಹೀಗಾಗಿ ಡಿಕೆಶಿ ಅವರ ಬೆಂಬಲಕ್ಕೆ ನಾವಿದ್ದೇವೆ ಎಂದು ಪ್ರತಿಭಟನಾಕಾರರು ಹೇಳಿದ್ರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ