‘ಸಾರಿಗೆ’ ಸಮಸ್ಯೆ ಬಗೆಹರಿಸಲು ಸಮಯ ಬೇಕು

ಸೋಮವಾರ, 11 ಸೆಪ್ಟಂಬರ್ 2023 (16:41 IST)
ಖಾಸಗಿ ಸಾರಿಗೆ ಒಕ್ಕೂಟ 25ಕ್ಕೂ ಹೆಚ್ಚು ಬೇಡಿಕೆಗಳನ್ನ ಇಟ್ಟಿದೆ.. ಇವರ ಬೇಡಿಕೆ ಈಡೇರಿಸಲು 5 ಸಾವಿರ ಕೋಟಿ ಬೇಕು.. ಕೆಲ ವಿಚಾರ ಕೋರ್ಟ್‌ನಲ್ಲಿದೆ, ಸಮಯ ಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈ ವಿಚಾರದ ಚರ್ಚೆಗೆ ಸಭೆ ಕರೆದ್ರೆ ಬಂದಿಲ್ಲ.. ಅಂದು ಸಭೆಗೆ ಬಾರದೆ ಇಂದು ಪ್ರತಿಭಟನೆ ಮಾಡ್ತಿದ್ದಾರೆ.. ಬಿಜೆಪಿ ಅವಧಿಯಲ್ಲೇ ಸಮಸ್ಯೆ ಬಗೆಹರಿಸಬಹುದಿತ್ತು ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ