ಟಿನ್ ಫ್ಯಾಕ್ಟರಿ ಅಧ್ವಾನ- ಜನರಿಗೆ ಓಡಾಡಲು ಪುಟ್ಪಾತ್ ಇಲ್ಲ

ಮಂಗಳವಾರ, 7 ಫೆಬ್ರವರಿ 2023 (20:00 IST)
ಟಿನ್ ಫ್ಯಾಕ್ಟರಿ ಈಗ ಹೈಟೆಕ್ ಕ್ಕಾಗಿ ಅಭಿವೃದ್ಧಿಯಾಗ್ತಿದೆ. ಒಂದು ಕಡೆ ಮೆಟ್ರೋ ಕಾಮಗಾರಿ ನಡೆಯುತ್ತಿದೆ.ಮತ್ತೊಂದು ಕಡೆ ರಸ್ತೆಯನ್ನ ಹಗಲಿಕಾರಣ ಮಾಡ್ತಿದ್ದಾರೆ. ಈ ಎಲ್ಲ ಕಾಮಗಾರಿ ಸುಮಾರು 1 ವರ್ಷದಿಂದ ನಡೆಯುತ್ತಿದೆ ಆದ್ರು ಕುಂಟುತ್ತಾ ಕಾಮಗಾರಿ ಸಾಗ್ತಿದೆ. ಈ ಕಾಮಗಾರಿ ಮುಗಿಯದೇ ಇದೀಗ ಜನರಿಗೆ ಸಂಕಷ್ಟ ಶುರುವಾಗಿದೆ
 
ಹೌದು , ರಸ್ತೆಯಲ್ಲಿ ಜನರಿಗೆ ಹೋಗಲು ದಾರಿಯೇ ಇಲ್ಲ. ಇರುವ ಪುಟ್ಪಾತ್ ಮೇಲೆ ಮೆಟ್ರೋ ಕಾಮಗಾರಿ ನಡೆಯುತ್ತಿದೆ. ನಿತ್ಯ ಸಾವಿರಾರು ವಾಹನಗಳು ಓಡಾಡುವ ಈ ರಸ್ತೆಯಲ್ಲಿ ಜನರು ವಾಹನಗಳ ಮಧ್ಯೆನೇ ಓಡಾಡುತ್ತಾರೆ. ಆಷ್ಟರ ಮಟ್ಟಿಗೆ ಇಲ್ಲಿ ಜನರಿಗೆ ಫಜೀತಿ ಉಂಟಾಗಿದೆ.
 
ಟಿನ್ ಫ್ಯಾಕ್ಟರಿ, ಎನಾರಾಯಣಪುರ ಹೋಗಬೇಕಾದ್ರೆ ಈ ಹಿಂದೆ ಜನರು ಹೋಗುವುದಕ್ಕೆ ಪುಟ್ಪಾತ್ ಇತ್ತು. ಈಗ ಪುಟ್ಪಾತ್ ಇಲ್ಲ ಜನ ಓಡಾಡಲು ಪುಟ್ಪಾತ್ ಇಲ್ಲದೇ ನಿತ್ಯ ಯಾವಾಗ ಮೆಟ್ರೋ ಕಾಮಗಾರಿ ಮುಗಿಯುತ್ತೋ ಅಂತಿದ್ದಾರೆ.
 
ಕಿರಿದಾದ ರಸ್ತೆಯಲ್ಲಿ ನಡೆದುಕೊಂಡು ಹೋಗುವುದಕ್ಕೆ ಜನ ಆತಂಕಪಾಡುತ್ತಿದ್ದಾರೆ.ಸಂಜೆ ಆದ್ರೆ ಸಾಕು ಟ್ರಾಫಿಕ್ ಜಾಮ್ ಸಂಭವಿಸುತ್ತೆ. ಜನರಿಗೆ ಆಗ ಸೈಡಲ್ಲಿ ಹೋಗುವುದಕ್ಕೂ ಜಾಗ ಇರಲ್ಲ. ಈ ಮೆಟ್ರೋ ಕಾಮಗಾರಿಯಿಂದ ಜನರಿಗೆ ಕಿರಿಕಿರಿಯಾಗಿದ್ದು ,ಜನರು ಅಧಿಕಾರಿಗಳಿಗೆ ಹಿಡಿಶಾಪ ಹಾಕ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ