ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳು ಕಣದಿಂದ ಹಿಂದೆ ಸರಿಯಲು ಇಂದು ಕೊನೆಯ ದಿನವಾಗಿದೆ. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ಬಂಡಾಯಕೋರರಾಗಿ ಕಣಕ್ಕೆ ಇಳಿದಿರುವ ನಾಯಕರನ್ನು ಮನವೊಲಿಸಿ ನಾಮಪತ್ರ ಹಿಂದೆಗೆದುಕೊಳ್ಳುವಂತೆ ಮಾಡಲು ನಾಯಕರು ಪ್ರಯತ್ನ ನಡೆಸಿದ್ದಾರೆ. ಇಂದು 3 ಗಂಟೆತನಕ ನಾಮಪತ್ರ ಹಿಂದಕ್ಕೆ ಪಡೆಯಲು ಅವಕಾಶವಿದೆ.. ರಾಜಕೀಯ ಪಕ್ಷಗಳು ಟಿಕೆಟ್ ವಂಚಿತರಿಂದ ಬಂಡಾಯ ಎದುರಿಸುತ್ತಿದ್ದು, ಅವರನ್ನು ಮನವೊಲಿಸಲು ಸಂಧಾನ ಮಾಡಲಾಗ್ತಿದೆ. ನಾಯಕರ ಸಂಧಾನ ಸಫಲವಾಗಿದ್ಯಾ ಎಂಬುದು ಇಂದು ತಿಳಿಯಲಿದೆ. ಇನ್ನು ಬಂಡಾಯಗಾರರ ಮನವೊಲಿಸುವಲ್ಲಿ ಬಿಜೆಪಿ ಸಕ್ಸಸ್ ಆಗಿದ್ದು, ಶೇ.80ರಿಂದ 90ರಷ್ಟು ಜನರು ನಾಮಪತ್ರ ಹಿಂದಕ್ಕೆ ಪಡೆಯಲಿದ್ದಾರೆ ಎಂದು ದಾವಣಗೆರೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.