ಇಂದು ಮೋದಿ ಬೀದರ್, ವಿಜಯಪುರ, ಬೆಳಗಾವಿಯಲ್ಲಿ ಕ್ಯಾಂಪೇನ್

ಶನಿವಾರ, 29 ಏಪ್ರಿಲ್ 2023 (08:04 IST)
ವಿಜಯಪುರ ನಗರದ ಸೈನಿಕ್ ಶಾಲೆಯಲ್ಲಿ ಮಧ್ಯಾಹ್ನ 1 ಗಂಟೆಗೆ ಸಾರ್ವಜನಿಕ ಸಭೆಯಲ್ಲಿ ಮೋದಿ ಭಾಗಿ ಆಗಲಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 8 ಮತಕ್ಷೇತ್ರಗಳಿದ್ದು, ಅದರಲ್ಲಿ ಬಹುತೇಕ ಧರ್ಮ ಆಧಾರಿತ ಚುನಾವಣೆ ನಡೆಯಲಿದೆ.
 
ಅದೇ ಕಾರಣಕ್ಕೆ ಮೋದಿ ಆಗಮನ ಬಿಜೆಪಿಗರಲ್ಲಿ ಸಂತಸ ತಂದಿದೆ. ಇನ್ನು 8 ಮತಕ್ಷೇತ್ರದಲ್ಲಿ 7 ಮತಕ್ಷೇತ್ರಗಳಲ್ಲಿ ಬಿಜೆಪಿ ಧ್ವಜ ಹಾರಿಸಲು ಮೋದಿ ಮತ್ತು ಟೀಮ್ ಪ್ಲಾನ್ ಮಾಡಿದೆ.

ಬಿಜೆಪಿ ತೊರೆದಿರುವ ಲಕ್ಷ್ಮಣ ಸವದಿಗೆ ಕಡಿವಾಣ ಹಾಕುವ ಮೂಲಕ ಡ್ಯಾಮೇಜ್ ಕಂಟ್ರೋಲ್ ಮಾಡಲು ಮೋದಿ ರಣತಂತ್ರ ರೂಪಿಸಿದ್ದಾರೆ. ವಿಜಯಪುರ ನಂತರ ಬೆಳಗಾವಿಗೆ ತೆರಳಲಿದ್ದಾರೆ.

ಹೆಲಿಕಾಪ್ಟರ್ ಮೂಲಕ ಮಧ್ಯಾಹ್ನ 2:45 ಕ್ಕೆ ಯಬರಟ್ಟಿಗೆ ಆಗಮಿಸಿ ಬಿಜೆಪಿ ಪ್ರಚಾರ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಮಧ್ಯಾಹ್ನ 3:30ಕ್ಕೆ ಯಬರಟ್ಟಿಯಿಂದ ಹೆಲಿಕಾಪ್ಟರ್ ಮೂಲಕ ಬೆಳಗಾವಿಗೆ ಮೋದಿ ಆಗಮಿಸಿ ಅಲ್ಲಿಂದ ಬೆಂಗಳೂರಿಗೆ ವಿಶೇಷ ವಿಮಾನದಲ್ಲಿ ತೆರಳಲಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ