4 ವರ್ಷ ಪೂರೈಸಿದ ಸಚಿವರಿಗೆ ಕೊಕ್..? ನಾಳೆ ನಿರ್ಧಾರ

ಶನಿವಾರ, 25 ಫೆಬ್ರವರಿ 2017 (10:30 IST)
ಹೈಕಮಾಂಡ್`ಗೆ ಕೋಟಿ ಕೋಟಿ ಕಪ್ಪ ನೀಡಿದ ಆರೋಪದ ಡೈರಿ ಬಿಡುಗಡೆ ಬಳಿಕ ಕಾಂಗ್ರೆಸ್ ವಲಯದಲ್ಲಿ ತಳಮಳ ಶುರುವಾಗಿದೆ. ಇದರ ಬೆನ್ನಲ್ಲೇ ಮತ್ತೊಂದು ಪ್ರಹಸನಕ್ಕೆ ರಾಜ್ಯ ಕಾಂಗ್ರೆಸ್ ಸಜ್ಜಾಗಿದೆ. ನಾಳೆ ಕಾಂಗ್ರೆಸ್ ಸಮನ್ವಯ ಸಮಿತಿ ಸಭೆ ನಡೆಯಲಿದ್ದು, ಸಂಪುಟ ಪುನಾರಚನೆ ಬಗ್ಗೆ ಪ್ರಮುಖವಾಗಿ ಚರ್ಚೆ ನಡೆಯಲಿದೆ ಎನ್ನಲಾಗಿದೆ.


4 ವರ್ಷ ತುಂಬಿದ ಸಚಿವರಿಗೆ ಕೊಕ್?: ವರದಿಗಳ ಪ್ರಕಾರ, 4 ವರ್ಷ ಪೂರೈಸಿದ ಸಚಿವರನ್ನ ಕೈಬಿಟ್ಟು ಹೊಸಬರಿಗೆ ಸ್ಥಾನ ಕಲ್ಪಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.  ಈ ಬಗ್ಗೆ ಕೆಪಿಸಿಸಿಯೇ ಪ್ರಸ್ತಾವನೆ ಇಟ್ಟಿದೆ ಎನ್ನಲಾಗಿದೆ.

ವಿಧಾನಸಭೆ ಚುನಾವಣೆಗೆ ಹತ್ತಿರತ್ತಿರ ಒಂದು ವರ್ಷ ಮಾತ್ರ ಬಾಕಿ ಉಳಿದಿದ್ದು, ಕೆಲ ಸಚವರಿಗೆ ಕೊಕ್ ನೀಡಿ, ಜಾತಿ, ಪ್ರಾದೇಶಿಕತೆ ಆದಾರದ ಮೇಲೆ ಸಚಿವ ಸ್ಥಾನ ನೀಡುವ ಚಿಂತನೆ ನಡೆದಿದೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ