ಅಪಘಾತದಲ್ಲಿ ಒಬ್ಬರು ಸಾವು ಕಂಡಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೇಂದ್ರ ರೈಲ್ವೆಯ ಸಿಪಿಆರ್‌ಒ ಈ ಮಾಹಿತಿ ನೀಡಿದ್ದು, ಅಪಘಾತ ವರದಿಯಾದ ಕೂಡಲೇ ಅಪಘಾತ ಪರಿಹಾರ ರೈಲು ಮತ್ತು ವೈದ್ಯಕೀಯ ವ್ಯಾನ್ ಸ್ಥಳಕ್ಕೆ ತಲುಪಿದೆ ಎಂದು ತಿಳಿಸಿದ್ದಾರೆ.
ಮಾಹಿತಿ ಪ್ರಕಾರ, ಜಯನಗರ ಎಕ್ಸ್ ಪ್ರೆಸ್ ಮುಂಬೈನ ಲೋಕಮಾನ್ಯ ತಿಲಕ್ ಟರ್ಮಿನಸ್ ನಿಂದ ನಾಸಿಕ್ ಗೆ ಬೆಳಗ್ಗೆ 11.30ಕ್ಕೆ ಹೊರಟಿತ್ತು. ಮಧ್ಯಾಹ್ನ 3 ಗಂಟೆಗೆ ದೇವ್ಲಾಲಿ(ನಾಸಿಕ್ ಬಳಿ) ತಲುಪಿದಾಗ, ಡೌನ್ ಲೈನ್ ರೈಲಿನ 10 ಬೋಗಿಗಳು ಹಳಿತಪ್ಪಿದವು. ಘಟನೆ ಬಳಿಕ ಸ್ಥಳದಲ್ಲಿ ಅಪಾರ ಜನ ಜಮಾಯಿಸಿದ್ದಾರೆ.
ಜಯನಗರ ಎಕ್ಸ್ ಪ್ರೆಸ್ ಅಪಘಾತದಿಂದಾಗಿ ಈ ಮಾರ್ಗದಲ್ಲಿ ಸಂಚರಿಸುವ ಕೆಲವು ರೈಲುಗಳ ಸಂಚಾರ ರದ್ದುಗೊಳಿಸಿದ್ದು, ಕೆಲ ರೈಲುಗಳ ಮಾರ್ಗ ಬದಲಾಯಿಸಲಾಗಿದೆ. ಸೆಂಟ್ರಲ್ ರೈಲ್ವೇ ಸಿಪಿಆರ್‌ಒ ಪ್ರಕಾರ, ಮೂರು ರೈಲುಗಳನ್ನು ರದ್ದುಗೊಳಿಸಲಾಗಿದೆ