ಇಂದು ಮತ್ತು ನಾಳೆ ಬೆಂ-ಹುಬ್ಬಳ್ಳಿ ಮಧ್ಯೆ ರೈಲು ರದ್ದು
ನೈಋತ್ಯ ರೈಲ್ವೆಯು ಬೆಂಗಳೂರು-ಹುಬ್ಬಳ್ಳಿ ಮಧ್ಯೆ ಪ್ರಯಾಣಿಸುವ ಎರಡು ರೈಲುಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದೆ. ನವೆಂಬರ್ 20 ಮತ್ತು 21 ರಂದು ಪ್ರಯಾಣಿಸಬೇಕಿದ್ದ ರೈಲು ಸಂಖ್ಯೆ 07340 ಮತ್ತು 07339 ಕೆಎಸ್‌ಆರ್ ಬೆಂಗಳೂರು-ಎಸ್‌ಎಸ್‌ಎಸ್ ಹುಬ್ಬಳ್ಳಿ ಮತ್ತು ಕೆಎಸ್‌ಆರ್ ಬೆಂಗಳೂರು ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಅನ್ನು ಕಳಪೆ ಆಕ್ಯುಪೆನ್ಸಿ ಕಾರಣ ನೀಡಿ ರದ್ದುಗೊಂಡಿವೆ. ಎಸ್‌ಎಸ್‌ಎಸ್ ಹುಬ್ಬಳ್ಳಿಯಿಂದ ಪ್ರಯಾಣಿಸುವ ರೈಲುಗಳು ಕಳಪೆ ಆಕ್ಯುಪೆನ್‌ಸಿಯ ಕಾರಣ ಮುಂದಿನ ಸುತ್ತೋಲೆ ಹೊರಡಿಸುವವರೆಗು ರದ್ದಾಗೊಳಿಸಲಾಗುತ್ತದೆ.