ಸಿಎಂ ಸೂಚನೆ ನೀಡಿದ ಬೆನ್ನಲ್ಲೇ ಕಾರ್ಯಪ್ರವೃತ್ತವಾದ ಜಿಲ್ಲಾಡಳಿತ ಆಕೆಯನ್ನು ಸಂಪರ್ಕಿಸಿದೆ. ಸಮಸ್ಯೆ ತಿಳಿದ ಒಂದೇ ದಿನದಲ್ಲಿ ರಾಬಿಯಾಗೆ 20/30 ಅಳತೆಯ ನಿವೇಶನವನ್ನೂ ಮಂಜೂರು ಮಾಡಿದೆ. ರಾಬಿಯಾ ಬಡ ಕುಟುಂಬದವಳಾಗಿದ್ದು, ಆಶ್ರಯ ಯೋಜನೆಯಡಿ ನಿವೇಶನ ನೀಡಲು ಸೆಪ್ಟೆಂಬರ್ 25 ರಂದು ಆಶ್ರಯ ಸಮಿತಿ ನಿರ್ಣಯ ಕೈಗೊಂಡಿತ್ತು. ಆದರೆ ಇದುವರೆಗೆ ಸೈಟು ನೀಡದೇ ಅಧಿಕಾರಿಗಳು ಸತಾಯಿಸಿದ್ದರು. ಹೀಗಾಗಿ ನೇರವಾಗಿ ಸಿದ್ದರಾಮಯ್ಯನವರ ಗಮನ ಸೆಳೆದು ತನಗೆ ಬೇಕಾದ ಸೈಟು ಗಿಟ್ಟಿಸಿಕೊಂಡಿದ್ದಾಳೆ. ಇದೀಗ ಗೃಹಸಚಿವ ಜಿ ಪರಮೇಶ್ವರ್ ಆಶ್ರಯ ಸಮಿತಿ ಸಭೆಯ ನಡಾವಳಿ ಪತ್ರವನ್ನು ರಾಬಿಯಾಗೆ ನೀಡಿದ್ದು ಶೀಘ್ರದಲ್ಲೇ ಮನೆ ಕೊಡಲಾಗುವುದು ಎಂದು ಭರವಸೆ ನೀಡಿದ್ದಾರೆ.