ಕಳಪೆ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕಾಮಗಾರಿಗೆ ಒಂದು ಕುಟುಂಬವೇ ದುರಂತ ಅಂತ್ಯ ಕಂಡಿದೆ.ಯಾರೋ ಮಾಡಿದ ತಪ್ಪಿಗೆ ಇನ್ಯಾರಿಗೋ ಶಿಕ್ಷೆ ಆಗಿದೆ. ಅದೊಂದು ಸುಂದರ ಸಂಸಾರ.ಮುದ್ದಾದ ಎರಡು ಅವಳಿ ಮಕ್ಕಳು, ಎಲ್ಲವು ಚೆನ್ನಾಗಿಯೇ ಇತ್ತು, ಆದ್ರೆ ವಿಧಿಯ ವಕ್ರದೃಷ್ಟಿಗೆ ತಾಯಿ ಮಗ, ಮೃತಪಟ್ಟರೆ ,ಅಪ್ಪ ಮಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಾಗವಾರ ಬಳಿಯಲ್ಲಿ ನಿರ್ಮಾಣ ವಾಗುತ್ತಿರುವ ಮೆಟ್ರೋ ಪಿಲ್ಲರ್ ಇಂದು ಬೆಳಗ್ಗೆ ಸುಮಾರು 9.30 ರ ಸಮಯ ಕ್ಕೆ ಏಕಾಏಕಿ ಕುಸಿದು ಬಿದ್ದಿದೆ. ಗೊಟ್ಟಿಗೆರೆಯಿಂದ ಏರ್ ಪೋರ್ಟ್ ರಸ್ತೆ ಯ ನಿರ್ಮಾಣ ವಾಗುತ್ತಿದ್ದ ಮೆಟ್ರೋ ಪ್ರಾಜೆಕ್ಟ್ ಇದಾಗಿದ್ದು ಇದೇ ರಸ್ತೆಯಲ್ಲಿ ಸುಮಾರು ವಾಹನಗಳು ಸಂಚರಿಸುತ್ತಿದ್ದವು ಆದ್ರೇ ವಿಧಿಯ ಕ್ರೂರಿ ಆಟ ಮಾತ್ರ ಹೋರಮಾವು ನಿವಾಸಿಯಾದ ಲೋಹಿತ್ ಕುಟುಂಬವನ್ನು ಬಲಿ ಪಡೆದಿದೆ. ಲೋಹಿತ್ ಪತ್ನಿ ತೇಜಸ್ವೀನಿಯನ್ನ ಮನ್ಯಾತ ಟೆಕ್‌ಪಾರ್ಕ್ ನಲ್ಲಿ ಕೆಲಸಕ್ಕೆ ಬಿಟ್ಟು ಇಬ್ಬರು ಮಕ್ಕಳನ್ನು ಬೇಬಿ ಸಿಟ್ಟಿಂಗ್ ಗೆ ಬಿಡಲು ತೆರಳುತ್ತಿದ್ದರು.ಆದ್ರೇ ಇದೇ ಪಿಲ್ಲರ್ ಗಾಡಿಯ ಮೇಲೆ ಬಿದ್ದಿದೆ. ತೀರ್ವವಾಗಿ ಗಾಯಗೊಂಡಿದ್ದ ತೇಜಸ್ವಿನಿಯನ್ನ ಹಾಗೂ ಎರಡು ವರ್ಷದ ಮಗ ವಿಹಾನ್ ನ ಆಸ್ಟಿರೋ ಆಸ್ಪತ್ರೆಗೆ ದಾಖಲಸಿದ್ದಾರೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಮೃತ ಪಟ್ಟಿದ್ದಾರೆ.
ಇನ್ನೂ ಪಿಲ್ಲರ್ ನಿರ್ಮಾಣ ಕಾರ್ಯ ಪೂರ್ಣವಾಗಿರಲಿಲ್ಲ. ಅದಕ್ಕೂ ಮುನ್ನ ಕಬ್ಬಿಣದ ಸರಳುಗಳನ್ನ ನಿಲ್ಲಿಸಲಾಗಿತ್ತು. ಕಾಂಕ್ರೀಟ್ ತುಂಬುವುದಕ್ಕೂ ಮುನ್ನ ಈ ಸರಳುಗಳ ತೂಕವೇ ಕನಿಷ್ಟ 2.5 ರಿಂದ 3 ಟನ್ ರಷ್ಟಿರುತ್ತೆ.ಕಾಂಕ್ರೀಟ್ ತುಂಬವ ಮುನ್ನ ಸರಳುಗಳಿಗೆ ಸರಿಯಾಗಿ ಸಪೋರ್ಟ್ ನೀಡಿರಬೆರಕಾಗುತ್ತದೆ. ಆದರೆ ಕೇವಲ ಸರಳುಗಳನ್ನ ನಿಲ್ಲಿಸಿ, ಸಪೋರ್ಟಿಂಗ್ ಕಂಬಿ ನೀಡದೇ ಬಿಟ್ಟಿರುವುದು ಕೂಡ. ದುರಂತಕ್ಕೆ ಕಾರಣವಾಗಿದೆ.ಮೆಟ್ರೋ ಅಜಾಗರೂಕತೆಗೆ ಎರಡು ಅಮಾಯಕ ಜೀವ ಬಲಿಯಾಗಿದೆ.ಇನ್ನೂ ಮುದ್ದಾದ ಮೊಮ್ಮಗನನ್ನ, ಸೊಸೆಯನ್ನ ಕಳೆದುಕೊಂಡ ಅಜ್ಜಿಯ ಗೋಳಾಟ ಮುಗಿಲು ಮುಟ್ಟಿದೆ.
ಘಟನೆ ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್, ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಚಂದ್ರಶೇಖರ್ ಹಾಗೂ ಡಿಸಿಪಿ ಭೀಮಾಶಂಕರ ಗುಳೇದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ದುರಂತ ದೃಶ್ಯಗಳು ಸಿಸಿಟಿಯಲ್ಲಿ ಸೆರೆಯಾಗಿದೆ.