ಯಲಹಂಕದ ಜಕ್ಕೂರು ರೈಲ್ವೇ ಟ್ರ್ಯಾಕ್ ಬಳಿ ಎರೆಡು ಅಪರಿಚಿತ ಶವಗಳು ಪತ್ತೆ
ಯಲಹಂಕದ ಜಕ್ಕೂರು ರೈಲ್ವೇ ಟ್ರ್ಯಾಕ್ ಬಳಿ ಎರೆಡು ಅಪರಿಚಿತ ಶವಗಳು ಪತ್ತೆಯಾಗಿದೆ.20 ರಿಂದ 25 ವರ್ಷದ ವಯಸ್ಸಿನ ಯವಕರ ಮೃತ ದೇಹವಾಗಿದ್ದು ಈ ದೇಹದ ಸ್ಥಿತಿಗಳು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.ರೈಲ್ವೇ ಟ್ರ್ಯಾಕ್ ನ ಪಕ್ಕದ ಮುಳ್ಳು ಪೊದೇಯಲ್ಲಿ ಈ ದೇಹಗಳು ಸಿಕ್ಕಿದ್ದು ರೈಲ್ವೆ ಟ್ರ್ಯಾಕ್ ದಾಟುವ ಸಂದರ್ಭ ಸಾವನ್ನಪ್ಪಿರುವ ಶಂಕೆಯನ್ನು ಪೊಲೀಸರು ವ್ಯಕಪಡಿಸುತ್ತಿದ್ದಾರೆ.ಇನ್ನು ಪ್ರಕರಣವನ್ನು ದಾಖಲಿಸಿಕೊಂಡಿರುವ ಬೈಯಪ್ಪನಹಳ್ಳಿ ರೈಲ್ವೇ ಪೊಲೀಸರು ಮೃತ ದೇಹಗಳ ಛಹರೆ ಹಾಗು ಸಾವಿಗೆ ನಿಖರ ಕಾರಣ ಪತ್ತೆ ಹಚ್ಚಲು ತನಿಖೆಯನ್ನ ಕೈಗೊಂಡಿದ್ದಾರೆ.