ಕಾವೇರಿ ಸಭೆ : ನೀವೇ ಐಡಿಯಾ ಕೊಡಿ ಪ್ಲೀಸ್ ಎಂದ ಉಮಾಭಾರತಿ

ಗುರುವಾರ, 29 ಸೆಪ್ಟಂಬರ್ 2016 (13:15 IST)
ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರದ ಮಧ್ಯಸ್ಥಿಕೆಯಲ್ಲಿ ನಡೆಯುತ್ತಿರುವ ಉಭಯ ರಾಜ್ಯಗಳ ಸಂದಾನ ಸಭೆಯಲ್ಲಿ ಕರ್ನಾಟಕ ಹಾಗೂ ತಮಿಳುನಾಡಿನ ಮಧ್ಯ ಜಟಾಪಟಿ ಮುಂದುವರೆದಿದೆ. ಉಭಯ ರಾಜ್ಯಗಳ ವಾದ ವಿವಾದದಿಂದ ಕಂಗಾಲಾದ ಕೇಂದ್ರ ಜಲ ಸಂಪನ್ಮೂಲ ಸಚಿವೆ ಉಮಾಭಾರತಿ ವಿವಾದ ಇತ್ಯರ್ಥಕ್ಕೆ ನೀವೇ ಐಡಿಯಾ ಕೊಡಿ ಪ್ಲೀಸ್ ಎಂದು ಹೇಳಿದರು.
 
ಕೇಂದ್ರದ ಮಧ್ಯಸ್ಥಿಕೆಯಲ್ಲಿ ನಡೆಯುತ್ತಿರುವ ಸಭೆಯಲ್ಲಿ ರಾಜ್ಯದಲ್ಲಿ ಕುಡಿಯುವ ನೀರಿಗೂ ಅಭಾವವಿದೆ. ಉಭಯ ರಾಜ್ಯಗಳಲ್ಲಿ ನೀರಿನ ಲಭ್ಯತೆ ಕುರಿತು ವರಿಶೀಲನೆ ನಡೆಸಲು ವಿಶೇಷ ತಂಡ ರಚಿಸಿ ನ್ಯಾಯ ನೀಡಿ. ಇನ್ನೂ ಮುಂದೆ ತಮಿಳುನಾಡಿಗೆ ನೀರು ಬಿಡಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟವಾಗಿ ವಾದಿಸಿದರು.
 
ಸುಪ್ರೀಂಕೋರ್ಟ್ ಆದೇಶದಂತೆ ಕಾವೇರಿ ನದಿಯಿಂದ ತಮಿಳುನಾಡಿಗೆ ನೀರು ಬಿಡಲೇ ಬೇಕು. ಇಲ್ಲವಾದರೇ ಈ ಸಭೆ ಪೂರ್ಣಗೊಳ್ಳಲ್ಲ ಎಂದು ತಮಿಳುನಾಡಿನ ಪ್ರತಿನಿಧಿಗಳು ವಾದಿಸಿದರು.
 
ಉಭಯ ರಾಜ್ಯಗಳ ವಾದ ವಿವಾದದಿಂದ ಉಭಯ ರಾಜ್ಯದ ನಾಯಕರಿಗೆ ಪ್ರತ್ಯೇಕವಾಗಿ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲು ಕೇಂದ್ರ ಜಲ ಸಂಪನ್ಮೂಲ ಸಚಿವೆ ಉಮಾಭಾರತಿ ಸೂಚನೆ ನೀಡಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ