ನಗರದಲ್ಲಿ ಇದ್ದು ಇಲ್ಲದಂತಾದ ಇ – ಶೌಚಾಲಯ

ಶುಕ್ರವಾರ, 29 ಜುಲೈ 2022 (20:47 IST)
ಬಿಬಿಎಂಪಿ ಕಳೆದ ಎರಡು ವರ್ಷಗಳ ಹಿಂದೆ ಸಾರ್ವಜನಿಕರಿಗೆ ಉಪಯೋಗವಾಗ್ಲಿ ಅನ್ನುವ ಉದ್ದೇಶದಿಂದ ಮತ್ತು ಪರಿಸರಸ್ನೇಹಿ ಮತ್ತು ಸಾರ್ವಜನಿಕರ ತುರ್ತು ಅಗತ್ಯಕ್ಕೆ ಪೂರಕವಾಗಿ  ನಿರ್ಮಿಸಲಾಗಿತ್ತು. ಎರಡು ಹಂತಗಳಲ್ಲಿ 169 ಕಡೆ ಈ ಶೌಚಾಲಯವನ್ನು ಪ್ರಾರಂಭಿಸಿತ್ತು ಆದರೆ ಕೆಲವು ಕಡೆ ಇ ಶೌಚಾಲಯ ಕೆಟ್ಟು ನಿಂತರೆ ಮತ್ತೆ ಕೆಲವೆಡೆ ಸಾರ್ವಜನಿಕವಾಗಿ ಬಳಸಿಕೊಳ್ಳುತ್ತಿಲ್ಲ ಅನ್ನುವ ಮಾತು ಇದೆ.
 
ಬಿಬಿಎಂಪಿ ಮೊದಲ ಹಂತದಲ್ಲಿ 87 ಮತ್ತು ಎರಡನೇ ಹಂತದಲ್ಲಿ 82 ಶೌಚಾಲಯವನ್ನು ಪರಿಚಯಿಸಿತ್ತು. ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುವುದು ಇ – ಶೌಚಾಲಯ ಪರಿಚಯಿಸಿದ ಮೇಲೆ ಕಡಿಮೆಯಾಗಲಿದೆ ಎಂದು ಭಾವಿಸಲಾಗಿತ್ತು. ಆದರೆ ಸಾರ್ವಜನಿಕರು ಈ ಶೌಚಾಲಯವನ್ನು ಬಳಸದೆ ಅದರ ಹಿಂದೆ ಹೋಗಿ ಮೂತ್ರವಿಸರ್ಜನೆ ಮಾಡುತ್ತಿರುವುದರಿಂದ ಮತ್ತಷ್ಟು ಅವಮಾನಕ್ಕೀಡಾಗಿದೆ. 
 
 ಬೆಂಗಳೂರು ನಗರಕ್ಕೆ ಇ – ಶೌಚಾಲಯಗಳ ಅವಶ್ಯಕತೆ ಇರಲಿಲ್ಲ. ಇರುವಂತಹ ಇ – ಶೌಚಾಲಯಗಳನ್ನು ಸಾರ್ವಕನಿಕರು  ಬಳಸಿಕೊಳ್ಳುತ್ತಿಲ್ಲ . ಅಧಿಕಾರಿಗಳು ಹಣ ದೋಚುವ ನೆಪಕ್ಕೆ ಈ  ರೀತಿ ನಿರ್ಮಾಣ ಮಾಡಿ ಕೈ ಬಿಡ್ಡಿದ್ದಾರೆ ಎಂದು ಸಾರ್ವಜನಿಕರು ಆರೋಪ ಮಾಡದ್ದಾರೆ.
 
 ಎಲ್ಲಾ ಕಾರಣಗಳಿಗಾಗಿ ಸ್ವಚ್ಛ ಸರ್ವೇಕ್ಷಣ ಅಭಿಯಾನದಲ್ಲಿ ಬೆಂಗಳೂರು ಉತ್ತಮ ಸ್ಥಾನ ಪಡೆಯಲು ಆಗುತ್ತಿಲ್ಲ.ಕೆಲವು ಕಡೆ ಹೇಳಿಕೊಳ್ಳುವಂತಹ ಸ್ವಚ್ಛತೆ  ಇ – ಶೌಚಾಲಯಗಳಲ್ಲಿ ಇಲ್ಲದಂತಾಗಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ