ತುರ್ತು ವಿಚಾರಣೆ : ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಗ್ರೀನ್ ಸಿಗ್ನಲ್
ಅಂಜುಮಾನ್ ಸಂಸ್ಥೆ ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ಪೀಠ ವಜಾಗೊಳಿಸಿದೆ. ಈ ಮೂಲಕ ಮೊದಲ ಬಾರಿಗೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ನಡೆಯಲಿದೆ.
ನ್ಯಾ.ಅಶೋಕ್ ಎಸ್ ಕಿಣಗಿ ಅವರ ಏಕಸದಸ್ಯ ಪೀಠ ರಾತ್ರಿ 10 ಗಂಟೆಗೆ ತುರ್ತು ವಿಚಾರಣೆ ನಡೆಸಿ ರಾತ್ರಿ 11:30ಕ್ಕೆ ಆದೇಶ ಪ್ರಕಟಿಸಿತು.
ಹುಬ್ಬಳ್ಳಿ ಆಸ್ತಿಯ ಹಕ್ಕು ಪಾಲಿಕೆಗೆ ಸೇರಿದೆ. ಹೀಗಾಗಿ ಮಧ್ಯಂತರ ಆದೇಶ ಹೊರಡಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳಿ ಕೋರ್ಟ್ ಅಂಜುಮಾನ್ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ಆದೇಶದಲ್ಲಿ ಸರ್ಕಾರ ಗಣೇಶೋತ್ಸವದ ಜವಾಬ್ದಾರಿ ತೆಗೆದುಕೊಳ್ಳಬೇಕು. ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದೆ.