ಮೈಸೂರು ಪಾಕ್ ಸೇಲ್ ಮಾಡಿದ ವಾಟಾಳ್ ನಾಗರಾಜ್
ಮೈಸೂರು ಪಾಕ್ ನ್ನು ಮಾರಾಟ ಮಾಡೋ ಮೂಲಕ ಕನ್ನಡ ಚಳುವಳಿ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ.
ಮೈಸೂರು ಪಾಕ್ ಸೇಲ್ ಮಾಡೋ ಮೂಲಕ ಮೈಸೂರು ಪಾಕ್ ನಮ್ಮದೇ ಎಂದು ವಿನೂತನ ಶೈಲಿಯಲ್ಲಿ ಪ್ರತಿಭಟಿಸಿ ಗಮನ ಸೆಳೆದರು.
ಮೈಸೂರು ಪಾಕ್ ಅದ್ಭುತ ಸಿಹಿ ಹೊಂದಿದೆ. ವಿದೇಶಗಳಲ್ಲಿಯೂ ಹೆಸರುವಾಸಿಯಾಗಿದೆ. ಆದರೆ ಕೆಲವರು ತಮಿಳುನಾಡು ಮೈಸೂರು ಪಾಕ್ ನ ಮೂಲ ಅಂತ ವಿತಂಡ ವಾದ ಮಾಡುತ್ತಿದ್ದಾರೆ.
ಮೈಸೂರು ಪಾಕ್ ಹೆಸರು ಇರೋದ್ರಿಂದ ಇದು ನಮ್ಮದೇ ಅಂತ ವಾಟಾಳ್ ಹೇಳಿದ್ರು.