ಮಹಾರಾಷ್ಟ್ರದ ವಿರುದ್ಧ ರೊಚ್ಚಿಗೆದ್ದ ವಾಟಾಳ್ ನಾಗರಾಜ್

ಶನಿವಾರ, 26 ನವೆಂಬರ್ 2022 (15:17 IST)
ಮಹಾರಾಷ್ಟ್ರದ ಗುಂಡಾಗಿರಿ ವರ್ತನೆಗೆ ಸಿಡಿದೆದ್ದ  ವಾಟಾಳ್ ನಾಗರಾಜ್ ಬಣ ಮೈಸೂರು ಬ್ಯಾಂಕ್ ವೃತ್ತದಲ್ಲಿ ಧರಣಿ ನಡೆಸಿದರು.ಮಹಾರಾಷ್ಟ್ರದ ಸರ್ಕಾರಕ್ಕೆ ಧಿಕ್ಕಾರ  ಕೂಗಿ ಆಕ್ರೋಶ ಹೊರಹಾಕಿದರು.
 
ಮೈಸೂರು ಬ್ಯಾಂಕ್ ಸರ್ಕಲ್ ಬಳಿ ವಾಟಾಳ್ ಬಣ  ಟೈರ್ ಸುಟ್ಟು ಪ್ರತಿಭಟನೆ ನಡೆಸಿದರು.ರಾಜ್ಯ ಗಡಿ ವಿಚಾರಕ್ಕೆ ಬಂದರೆ ದೊಡ್ಡ ಮಟ್ಟದಲ್ಲಿ ಹೋರಾಡುತ್ತೇವೆ.ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ.ಸೊಲ್ಲಾಪುರ ,ಬಾಂಬೆ  ಕರ್ನಾಟಕಕ್ಕೆ ಬರಬೇಕು ಎಂದು ಮಹಾರಾಷ್ಟ್ರ ಸರ್ಕಾರದ ಠಾಕ್ರೆ ಯವರಿಗೆ ವಾಟಾಳ್  ಎಚ್ಚರಿಕೆ ಕೊಟ್ಟಿದ್ದಾರೆ.
 
ಕನ್ನಡಿಗರ ಮೇಲೆ ದಾಳಿ ಮಾಡಿದ್ದಾರೆ ನಿಮ್ಮ ಮೇಲೂ ದಾಳಿ ಮಾಡಲು ಸದಾ ಸಿದ್ದ.ನಾಳೆ ಮೈಸೂರಿನಲ್ಲಿ  ಪ್ರತಿಭಟನೆ ಮಾಡುತ್ತಿದ್ದೇವೆ.ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಪ್ರತಿಭಟನೆ ಮಾಡಲು ಸಜ್ಜಾಗಿದ್ದೇವೆ ಎಂದು ಈ ಮೂಲಕ ಮಹಾರಾಷ್ಟ್ರ ಸರ್ಕಾರಕ್ಕೆ ವಾಟಾಳ್ ನಾಗರಾಜ್ ಎಚ್ಚರಿಕೆ ಕೊಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ