ವಿದ್ವತ್ ಗೆ ತೀವ್ರ ಜ್ವರ! ಬೇರೆ ಆಸ್ಪತ್ರೆಗೆ ಸಾಗಿಸುತ್ತಾ ಕುಟುಂಬ ವರ್ಗ?!

ಶನಿವಾರ, 24 ಫೆಬ್ರವರಿ 2018 (10:00 IST)
ಬೆಂಗಳೂರು: ಶಾಸಕ ಹ್ಯಾರಿಸ್ ಪುತ್ರರ ಮೊಹಮ್ಮದ್ ನಲಪಾಡ್ ನಿಂದ ಹಲ್ಲೆಗೊಳಗಾದ ವಿದ್ವತ್ ಆರೋಗ್ಯ ಸ್ಥಿತಿ ಸೂಕ್ಷ್ಮವಾಗಿದೆ. ಎರಡು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದಾರೆ.
 

ಶ್ವಾಸಕೋಶ ಮತ್ತು ಕಣ್ಣು ಸೋಂಕಿಗೆ ತತ್ತಾಗಿದ್ದು, ಎರಡು ದಿನದಿಂದ ತೀವ್ರ ಜ್ವರವೂ ಇದೆ. ಸದ್ಯಕ್ಕೆ ಮಲ್ಯ ಆಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುವರಿದಿದೆ. ಡಾ. ಆನಂದ್ ನೇತೃತ್ವದ ತಂಡ ಚಿಕಿತ್ಸೆ ನೀಡುತ್ತಿದೆ.

ಸದ್ಯ ಆರೋಗ್ಯ ಸ್ಥಿತಿ ನಾಜೂಕಾಗಿರುವ ಕಾರಣ ಬೇರೆಡೆಗೆ ಸಾಗಿಸುವ ಸಂಭವ ಕಡಿಮೆ. ಹಾಗಿದ್ದರೂ ಮುಂಬೈ ಅಥವಾ ಸಿಂಗಾಪುರ್ ಗೆ ಸ್ಥಳಾಂತರಿಸುವ ಬಗ್ಗೆಯೂ ಕುಟುಂಬ ವರ್ಗ ಚಿಂತನೆ ನಡೆಸಿದೆ ಎನ್ನಲಾಗಿದೆ. ಸದ್ಯಕ್ಕೆ ವಿದ್ವತ್ ಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ