ಸಿದ್ದಗಂಗಾ ಮಠಕ್ಕೆ ಡಿಸಿಎಂ ಭೇಟಿ
ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಉಪಮುಖ್ಯಮಂತ್ರಿ, ಸ್ವಾಮೀಜಿಗಳ ಆರೋಗ್ಯ ವಿಚಾರಿಸಿದರು.
ಸಿದ್ದಗಂಗಾ ಶ್ರೀ ಗಳ ಆರೋಗ್ಯ ವಿಚಾರಿಸಲು ಸಿದ್ದಗಂಗಾ ಮಠಕ್ಕೆ ಡಿಸಿಎಂ ಡಾ.ಜಿ.ಪರಮೇಶ್ವರ ಭೇಟಿ ನೀಡಿದರು.
ಶ್ರೀಗಳು ಚೆನ್ನೈನಲ್ಲಿ ಚಿಕಿತ್ಸೆ ಪಡೆದು ಮಠಕ್ಕೆ ಆಗಮಿಸಿದ ಬಳಿಕ ಮೊದಲ ಬಾರಿಗೆ ಡಿಸಿಎಂ ಭೇಟಿ ಮಾಡಿದರು.
ಹಳೆ ಮಠದಲ್ಲಿ ಶ್ರೀಗಳ ಆಶಿರ್ವಾದ ಪಡೆದ ಡಿಸಿಎಂ ಪರಮೇಶ್ವರ್, ಕಿರಿಯ ಶ್ರೀ ಹಾಗೂ ವೈದ್ಯರ ಬಳಿ ಶ್ರೀಗಳ ಆರೋಗ್ಯ ಕುರಿತು ಮಾಹಿತಿ ಪಡೆದುಕೊಂಡರು.
ಹಳೆ ಮಠದಲ್ಲಿ ಬಿಗಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.