ವಿಜಯಪುರ : ರಾಜ್ಯಸಭೆ ಚುನಾವಣೆ ಬಳಿಕ ಇದೀಗ ಮತ್ತೊಂದು ಚುನಾವಣೆ ಮೂರು ಪಕ್ಷಗಳಿಗೆ ಪ್ರತಿಷ್ಠೆಯ ಮಿನಿಕಣವಾಗಿದೆ.
ಸಿಎಂ ಬೊಮ್ಮಾಯಿಗೆ ಮತ್ತೊಂದು ಅಗ್ನಿಪರೀಕ್ಷೆ ಎದುರಾಗಿದೆ. ಇಂದು ಶಿಕ್ಷಕ ಮತ್ತು ಪದವೀಧರರ ಕ್ಷೇತ್ರಕ್ಕೆ ಮತದಾನ ನಡೆಯಲಿದೆ.
ದಕ್ಷಿಣ ಪದವೀಧರ ಕ್ಷೇತ್ರವಾದ ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ, ವಾಯವ್ಯ ಪದವೀಧರ ಕ್ಷೇತ್ರವಾದ ಬೆಳಗಾವಿ, ಬಾಗಲಕೋಟೆ, ವಿಜಯಪುರ ಹಾಗೂ ಪಶ್ಚಿಮ ಶಿಕ್ಷಕರ ಕ್ಷೇತ್ರವಾದ ಧಾರವಾಡ, ಹಾವೇರಿ, ಗದಗ, ಉತ್ತರ
ಬೆಳಗ್ಗೆ 8ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ. ಅಖಾಡದಲ್ಲಿ 49 ಅಭ್ಯರ್ಥಿಗಳಿದ್ದಾರೆ. ದಕ್ಷಿಣ ಪದವೀಧರ ಕ್ಷೇತದ ಇತಿಹಾಸದಲ್ಲಿ ಯಾವತ್ತೂ ಕಾಂಗ್ರೆಸ್ ಗೆದ್ದಿಲ್ಲ. ಹೀಗಾಗಿ, ಕಾಂಗ್ರೆಸ್ ಗೆಲುವಿಗಾಗಿ ರಣ ತಂತ್ರ ರೂಪಿಸಿದ್ದರೆ, ಜೆಡಿಎಸ್ ತನ್ನ ಸ್ಥಾನ ಉಳಿಸಿಕೊಳ್ಳಲು ಯತ್ನಿಸುತ್ತಿದೆ.
ಬಿಜೆಪಿ ಮರಳಿ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದು ಕೊಳ್ಳಲು ಪ್ರಯತ್ನಿಸುತ್ತಿದೆ. ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿರುವ ಬಸವರಾಜ ಹೊರಟ್ಟಿಗೆ ಭವಿಷ್ಯದ ಪ್ರಶ್ನೆ ಆಗಿದೆ. ಇಲ್ಲಿ ಕಾಂಗ್ರೆಸ್, ಜೆಡಿಎಸ್ ಸಹ ಟಫ್ ಫೈಟ್ ಕೊಡ್ತಿವೆ.
ಎಂಲ್ಸಿ ಚುನಾವಣೆಯಲ್ಲೂ ಕುರುಡು ಕಾಂಚಾಣ ಕುಣೀತಿದೆ. ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿಗೆ ಮತ ಹಾಕಲು 1 ಮತಕ್ಕೆ 10 ಸಾವಿರ ರೂಪಾಯಿ ಆಮಿಷವೊಡ್ಡಲಾಗಿದೆ. ವಿಜಯಪುರ ನಗರ ಬಸ್ ನಿಲ್ದಾಣದಲ್ಲಿ ಹಣ ಹಂಚುವಾಗಲೇ ಚುನಾವಣಾಧಿಕಾರಿಗಳು ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ. 17.40 ಲಕ್ಷ ರೂಪಾಯಿ ನಗದು, ಒಂದು ಕಾರ್ ಜಪ್ತಿ ಮಾಡಿದ್ದಾರೆ.