ಪತ್ತೆಯಾದ ವಿವಿ ಪ್ಯಾಟ್ ಯಂತ್ರಗಳು: ಮತದಾರರಲ್ಲಿ ಆಕ್ರೋಶ

ಸೋಮವಾರ, 21 ಮೇ 2018 (15:51 IST)
ವಿಜಯಪುರ‌ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದ ಬಳಿ ಪತ್ತೆಯಾದ ವಿವಿ ಪ್ಯಾಟ್ ಮಶೀನ್ಸ್ ಘಟನೆ ಖಂಡಿಸಿ ಬಬಲೇಶ್ವರ ಕ್ಷೇತ್ರದ ಪರಾಜಿತ‌ ಬಿಜೆಪಿ ಅಭ್ಯರ್ಥಿ ವಿಜಯಕುಮಾರ ಪಾಟೀಲ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ.

ಬಬಲೇಶ್ವರ ನಾಕಾ ಬಳಿಯ ನಿವಾಸದಿಂದ ಡಿಸಿ ಕಚೇರಿವರೆಗೂ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಜನರು ಭಾಗಿಯಾಗಿ ಚುನಾವಣೆಯಲ್ಲಿ ಭಾರಿ ಅವ್ಯವಹಾರವಾಗಿದೆ ಎಂದು ಆರೋಪಿಸಲಾಗಿದೆ.
 
ವಿವಿ ಪ್ಯಾಟ್ ಮಶೀನ್ಸ್ ಬಬಲೇಶ್ವರ ಕ್ಷೇತ್ರಕ್ಕೆ ಸೇರಿವೆ. ಘಟನೆಯನ್ನು ‌ಸಿಬಿಐ ತನಿಖೆಗೆ ವಹಿಸಬೇಕೆಂದು ‌ಒತ್ತಾಯಿಸಿದ ಪ್ರತಿಭಟನಾಕಾರರು ಜಿಲ್ಲಾಡಳಿತ ಹಾಗೂ ಚುನಾವಣಾಧಿಕಾರಿಗಳ ‌ವಿರುದ್ದ ಘೋಷಣೆ ಕೂಗಿದರು.
 
ನ್ಯಾಯ ನೀಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿ ಆಕ್ರೋಶ ವ್ಯಕ್ತಪಡಿಸಿದ್ದರಿಂದ ಡಿಸಿ ಕಚೇರಿ ಆವರಣದಲ್ಲಿ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ