ಕಾವೇರಿ ಕೊಳ್ಳದಲ್ಲಿ ನೀರಿನ ಬವಣೆ

ಸೋಮವಾರ, 25 ಸೆಪ್ಟಂಬರ್ 2023 (20:20 IST)
ಕಾವೇರಿ ಕೊಳ್ಳದಲ್ಲಿ ನೀರು ಇಲ್ಲದ ಸ್ಥಿತಿ ಬಂದಿದೆ. ಮನೆಗೆ ಮಾರಿ ಊರಿಗೆ ಉಪಕಾರಿ ಎಂದು ಕಾಂಗ್ರೆಸ್ ಧೋರಣೆ ಇದೆ ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಅವರು, ಇದನ್ನು ಬಿಜೆಪಿ ಖಂಡಿಸುತ್ತೆ. ಪಕ್ಷಾತೀತವಾಗಿ ರಾಜ್ಯದಲ್ಲಿ ಖಂಡನೆ ವ್ಯಕ್ತವಾಗುತ್ತಿದೆ. INDIA ಕೂಟವನ್ನು ಖುಷಿ ಪಡಿಸಲು ರೈತರ ಗಮನವರಿಸುತ್ತಿಲ್ಲ. ಇದರ ಬದಲು ತಮಿಳಿನಾಡಿಗೆ ನೆರವು ಕೊಡಲು ಹೋಗಿದ್ದೀರಾ. ಇದು ಅಕ್ಷಮ್ಯ ಅಪರಾಧ ಎಂದ್ರು. ರೈತರ ವಕ್ರ ದೃಷ್ಟಿಗೆ ಬಲಿಯಾದ್ರೆ, ರೈತರ ಶಾಪಕ್ಕೆ ಸರ್ಕಾರ ಬಲಿಯಾಗುತ್ತದೆ. ಕಾವೇರಿ ವಿಚಾರದಲ್ಲಿ ಸರ್ಕಾರದ ನಡವಳಿಕೆ ರೈತರ ಪರವಾಗಿ ಇದ್ದೀವಿ ಎಂದು‌ ತೋರಿಸಿಲ್ಲ ಎಂದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ