ಕಾಂಗ್ರೆಸ್ ಅನ್ನು ಅಟ್ಟಾಡಿಸಿಕೊಂಡು ಬಡಿಯುತ್ತೇವೆ. ಕಾಂಗ್ರೆಸ್ ಇದ್ದರೆ ರೋಗವಿದ್ದಂತೆ - ಸಚಿವ ಅನಂತ್ ಕುಮಾರ್ ಹೆಗಡೆ

ಬುಧವಾರ, 2 ಮೇ 2018 (06:48 IST)
ಕಾರವಾರ : ಹಿಂದುಳಿದ ವರ್ಗಗಳಲ್ಲಿ ನೀವು ಹಿಂದುಳಿದವರು, ದಲಿತರು ಎಂದು ಬೇರ್ಪಡಿಸಿ  ಹಿಂದುಳಿದ ರೋಗವನ್ನು ಕೊಟ್ಟವರು ಕಾಂಗ್ರೆಸ್ಸಿನವರು ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗಡೆ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸದಾನಂದ ಸಭಾ ಭವನದಲ್ಲಿ ನಡೆದ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು,’ ಕಾಂಗ್ರೆಸ್ ಅನ್ನು ಅಟ್ಟಾಡಿಸಿಕೊಂಡು ಬಡಿಯುತ್ತೇವೆ. ಕಾಂಗ್ರೆಸ್ ಇದ್ದರೆ ರೋಗವಿದ್ದಂತೆ ಕಾಂಗ್ರೆಸ್ ಅನ್ನು ಶಾಶ್ವತವಾಗಿ ಮನೆಗೆ ಕಳುಹಿಸಬೇಕು, 70 ವರ್ಷಗಳಿಂದ ಕಾಂಗ್ರೆಸ್ ನಮ್ಮ ಧರ್ಮವನ್ನು ಅವಹೇಳನ ಮಾಡಿದೆ. ನಮ್ಮ ದೇಶಕ್ಕೆ ಸ್ವಾತಂತ್ರ ಬಂದಾಗ ದೇಶದಲ್ಲಿ ನಾಲ್ಕೂ ಐದೋ ಶೇಕಡಾ ಮುಸ್ಲಿಮರಿದ್ದರು. ಆದರೆ ಅನಧಿಕೃತವಾಗಿ 30% ಮುಸ್ಲೀಮರಾಗಿದ್ದಾರೆ. ಎಲ್ಲಿ 30% ಮುಸಲ್ಮಾನರಾಗುತ್ತಾರೋ ಆ ದೇಶ ಮುಸ್ಲಿಂ ರಾಷ್ಟ್ರವಾಗುತ್ತೆ ಇದಕ್ಕೆ ಇತಿಹಾಸ ಸಾಕ್ಷಿ’ ಎಂದು ವಾಗ್ದಳಿ ನಡೆಸಿದ್ದಾರೆ.

 

ಹಾಗೇ ‘ನಾನು ಮುಸ್ಲಿಂ ದ್ವೇಷಿಯಲ್ಲ. ಇನ್ನೂಂದು ಧರ್ಮವನ್ನು ತುಳಿದು ನಾಶಮಾಡಿ ಬದುಕುವ ಸಂಸ್ಕೃತಿ ನಮ್ಮದಲ್ಲ. ಆದರೆ ಈ ಕಾಂಗ್ರೇಸ್ ಅಲ್ಪಸಂಖ್ಯಾತರ ತುಷ್ಟೀಕರಣದ ಹೆಸರಿನಲ್ಲಿ ಭಯೋತ್ಪಾದಕರ ಜೊತೆ ರಾಜಿ ಮಾಡಿಕೊಳ್ಳುತ್ತಿದೆ. ದೇಶಭಕ್ತರನ್ನು ಧಮನಿಸುತ್ತಿದೆ. ಯಾರು ಭಯೋತ್ಪಾದಕರು ಕೊಲೆಗಡುಕರು ಇದ್ದಾರೋ ಅವರು ಮುಖ್ಯಮಂತ್ರಿ ಜೊತೆ ಕುಳಿತು ಮೀಟಿಂಗ್ ಮಾಡುತಿದ್ದಾರೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ