ಕರ್ನಾಟಕ ಮಳೆ ಉತ್ಪಾದಿಸುವುದಿಲ್ಲ: ತಮಿಳುನಾಡಿಗೆ ಸಚಿವರ ಟಾಂಗ್

ಮಂಗಳವಾರ, 18 ಜುಲೈ 2017 (18:11 IST)
ರಾಜ್ಯದಲ್ಲಿ ಇಲ್ಲಿಯವರೆಗೆ ಉತ್ತಮ ಮಳೆಯಾಗದಿದ್ದರಿಂದ ಜಲಾಶಯಗಳಲ್ಲಿ ನೀರಿನ ಮಟ್ಟ ತುಂಬಾ ಕಡಿಮೆಯಿದೆ. ನಾವು ಮಳೆಯನ್ನು ಉತ್ಪಾದಿಸುವುದಿಲ್ಲ ಎಂದು ಜಲಸಂಪನ್ಮೂಲ ಖಾತೆ ಸಚಿವ ಎಂ.ಬಿ.ಪಾಟೀಲ್ ತಿರುಗೇಟು ನೀಡಿದ್ದಾರೆ. 
 
ಕಾವೇರಿ ನದಿ ನೀರು ಹಂಚಿಕೆ ಒಪ್ಪಂದದಂತೆ ನೀರು ಬಿಡಿ ಎನ್ನುವ ತಮಿಳುನಾಡಿನ ಬೇಡಿಕೆಗೆ ಸಚಿವ ಎಂ.ಬಿ.ಪಾಟೀಲ್ ಗರಂ ಆಗಿದ್ದು, ಜಲಾಶಯಗಳಲ್ಲಿ ನೀರಿನ ಮಟ್ಟ ತುಂಬಾ ಕಡಿಮೆಯಿದೆ. ನೀರಿಲ್ಲದಿರುವಾಗ ಹೇಗೆ ತಮಿಳುನಾಡಿಗೆ ನೀರು ಬಿಡುವುದು ಎಂದು ಪ್ರಶ್ನಿಸಿದ್ದಾರೆ.  
 
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪಾಟೀಲ್, ಜೂನ್ 1 ರಿಂದ ನಿನ್ನೆಯವರೆಗೆ 44 ಟಿಎಂಸಿ ನೀರು ತಮಿಳುನಾಡಿಗೆ ಬಿಡಬೇಕಾಗಿತ್ತು. ಆದರೆ, ಬಿಳಿಗುಂಡ್ಲು ಜಲಾಶಯದಿಂದ ನಾವು 2.2. ಟಿಎಂಸಿ ನೀರು ಬಿಟ್ಟಿದ್ದೇವೆ. ತಮಿಳುನಾಡು ನೀರು ಹರಿಸುವಂತೆ ಒತ್ತಡ ಹೇರುತ್ತಿದೆ. ಜಲಾಶಯಗಳು ಬರಿದಾಗಿರುವಾಗ ಹೇಗೆ ನೀರು ಬಿಡುವುದು ನಾವೇನು ಮಳೆ ಉತ್ಪಾದಿಸುತ್ತೀವಾ? ಎಂದು ಕಿಡಿಕಾರಿದ್ದಾರೆ.
 
ತಮಿಳುನಾಡಿಗೆ ನೀರಿನ ಹರಿಸುವುದನ್ನು ರಾಜ್ಯ ಸರ್ಕಾರ ನಿಲ್ಲಿಸಿಲ್ಲ. ನಮ್ಮ ಜಲಾಶಯಗಳಲ್ಲಿರುವ 30% ರಷ್ಟು ಒಳಹರಿವನ್ನು ನಾವು ಬಿಡುಗಡೆ ಮಾಡಿದ್ದೇವೆ ಎಂದು ಜಲಸಂಪನ್ಮೂಲ ಖಾತೆ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ