ಪ್ರಾಧಿಕಾರಕ್ಕೆ ನಾವು ಕೂಡ ಮನವಿ ಮಾಡಿದ್ದೇವೆ

ಶುಕ್ರವಾರ, 1 ಸೆಪ್ಟಂಬರ್ 2023 (17:30 IST)
ಇಂದು ಸುಪ್ರೀಂ ಕೋರ್ಟ್​ನಲ್ಲಿ ಕಾವೇರಿ ಅರ್ಜಿ ವಿಚಾರಣೆ ನಡೆಯಲಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಮತ್ತು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈಗಾಗಲೇ ಡಿಸಿಎಂ ಡಿ.ಕೆ.ಶಿವಕುಮಾರ್​​​ ದೆಹಲಿಗೆ ಹೋಗಿ ಕಾನೂನಾತ್ಮಕ ಸಭೆ ಮಾಡಿದ್ದಾರೆ. ನಮಗೆ ನೀರಿಲ್ಲ, ಇನ್ನು ತಮಿಳುನಾಡಿಗೆ ಕೊಡೋದು ಎಷ್ಟು ಸೂಕ್ತ ಎಂದು ಪ್ರಾಧಿಕಾರಕ್ಕೆ ನಾವು ಕೂಡ ಮನವಿ ಮಾಡಿದ್ದೇವೆ. ಸರ್ವಪಕ್ಷ ನಿಯೋಗ ಹೋಗಲು ನಾವು ರೆಡಿ ಇದ್ದೀವಿ ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ