ವಿಶೇಷ ಕಾರ್ಯಪಡೆ ರಚನೆ ಮಾಡಿದ್ದೇವೆ : ಬೊಮ್ಮಾಯಿ
ಹಾಸನ ಜಿಲ್ಲೆ, ಬೇಲೂರು ತಾಲೂಕಿನ, ಮಾಯಗೊಂಡನಹಳ್ಳಿ ಹೆಲಿಪ್ಯಾಡ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರಗಾಲವಿದ್ದಾಗ ಬಂದಂತಹ ಆನೆಗಳು ವಾಪಾಸ್ ಹೋಗಿಲ್ಲ.
ಕೆಲವು ಸಂದರ್ಭದಲ್ಲಿ ಜನರು ಕಾಡಿಗೆ ಹೋದಾಗ, ವಾತಾವರಣ ಬದಲಾವಣೆ ಹೀಗೆ ಹತ್ತು ಹಲವಾರು ಸಮಸ್ಯೆಗಳಿರುವುದರಿಂದ ಕಾಡಾನೆಗಳ ದಾಳಿಗಳು ಉಂಟಾಗಿವೆ. ಎಲ್ಲಿ ಕಾಡಾನೆಗಳ ಗುಂಪಿದೆ ಅಲ್ಲಿ ಅವುಗಳನ್ನು ಚದುರಿಸುವುದು ಕಷ್ಟ. ಈ ವರ್ಷ 15-16 ಆನೆಗಳನ್ನು ವಾಪಾಸ್ ಕಳುಹಿಸಿದ್ದೇವೆ.